
ನದಿಯಲ್ಲಿ ತೆಪ್ಪ ಮುಳುಗಿ ಏಳು ಮಂದಿ ಜಲಸಮಾಧಿ
ಬೀದರ್, ನ. 1– ಕರ್ನಾಟಕ–ಆಂಧ್ರ ಗಡಿ ಗ್ರಾಮ ಕಾರಾಮುಂಗಿ ಬಳಿ ಮಾಂಜ್ರಾ ನದಿಯಲ್ಲಿ ತೆಪ್ಪ ಮುಳುಗಿ ಒಂದೇ ಕುಟುಂಬಕ್ಕೆ ಸೇರಿದ ಏಳು ಜನರು ನೀರುಪಾಲಾಗಿದ್ದಾರೆ. ನಿನ್ನೆ ಮಧ್ಯಾಹ್ನ ನಡೆದ ದುರಂತದಲ್ಲಿ ಒಟ್ಟು 9 ಮಂದಿ ತೆಪ್ಪದಲ್ಲಿ ಪ್ರಯಾಣಿಸುತ್ತಿದ್ದು, ಇಬ್ಬರು ಈಜಿ ಪಾರಾಗಿದ್ದಾರೆ.
ಮೃತಪಟ್ಟವರಲ್ಲಿ ಮಾಣಿಕಪ್ಪ ಎಂಬುವರು ಜಿಲ್ಲೆಯ ಬಸವಕಲ್ಯಾಣದ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ತೆಪ್ಪದಲ್ಲಿದ್ದ ಗೋವಿಂದ, ನರಸಿಂಗ್ ಈಜಿ ದಡ ಸೇರಿದ್ದಾರೆ.
ಕಲ್ಕತ್ತ ಈಗ ಕೊಲ್ಕತ
ಕೊಲ್ಕತ, ಜ. 1– ಪಶ್ಚಿಮ ಬಂಗಾಳದ ರಾಜಧಾನಿ ‘ಕಲ್ಕತ್ತ’ದ ಹೆಸರನ್ನು ಇಂದಿನಿಂದ ಅಧಿಕೃತವಾಗಿ ‘ಕೊಲ್ಕತ’ ಎಂದು ಬದಲಾಯಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಲಾಗಿದೆ ಎಂದು ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.