ADVERTISEMENT

ಸೋಮವಾರ, 20–6–1994

​ಪ್ರಜಾವಾಣಿ ವಾರ್ತೆ
Published 19 ಜೂನ್ 2019, 20:00 IST
Last Updated 19 ಜೂನ್ 2019, 20:00 IST
   

ಚಳ್ಳಕೆರೆ: ಕಾಲ್ತುಳಿತಕ್ಕೆ ಬಾಲಕಿ ಬಲಿ

ಚಿತ್ರದುರ್ಗ, ಜೂನ್ 19– ಕನ್ನಡದ ಜನಪ್ರಿಯ ನಟ ಡಾ. ರಾಜ್‌ಕುಮಾರ್ ಅವರ ಮೆರವಣಿಗೆ ಸಂದರ್ಭದಲ್ಲಿ ಸೇರಿದ ಭಾರಿ ಜನರ ನೂಕು–ನುಗ್ಗಲು ಮತ್ತು ತಳ್ಳಾಟದಲ್ಲಿ ಒಬ್ಬ ಬಾಲಕಿ ಮೃತಪಟ್ಟ ದಾರುಣ ಘಟನೆ ಇಲ್ಲಿಗೆ 30 ಕಿ.ಮೀ ದೂರದ ಚಳ್ಳಕೆರೆಯಲ್ಲಿ ಇಂದು ಸಂಭವಿಸಿದೆ.

‘ಒಡಹುಟ್ಟಿದವರು’ ಚಲನಚಿತ್ರದ ಶತದಿನೋತ್ಸವ ಸಮಾರಂಭದಲ್ಲಿ ಭಾಗವಹಿಸಲು ಡಾ. ರಾಜ್‌ಕುಮಾರ್ ಇಂದು ಚಳ್ಳಕೆರೆಗೆ ಆಗಮಿಸಿದ್ದರು. ಸಮಾರಂಭಕ್ಕೆ ಮುಂಚಿತವಾಗಿ ಚಳ್ಳಕೆರೆ ಪಟ್ಟಣದಲ್ಲಿ ರಾಜ್‌ಕುಮಾರ್, ಪಾರ್ವತಮ್ಮ, ಅಂಬರೀಷ್, ಸುಧೀರ್ ಮುಂತಾದವರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು.

ADVERTISEMENT

ನೆರೆದಿದ್ದ ಭಾರೀ ಜನಸಮೂಹದ ಮಧ್ಯೆ ಕಾಲ್ತುಳಿತಕ್ಕೆ ಸಿಲುಕಿದ ಶೋಭಾ (10) ಸ್ವಲ್ಪ ಹೊತ್ತಿನಲ್ಲಿ ಮೃತಪಟ್ಟಳು. ಇತರ 8 ಜನರು ಗಾಯಗೊಂಡಿದ್ದು ಇವರಲ್ಲಿ ಹನುಮಂತಪ್ಪ (60), ಮಹಾಂತೇಶ (20) ಎಂಬುವವರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಇಬ್ಬರನ್ನೂ ಚಿತ್ರದುರ್ಗ ಆಸ್ಪತ್ರೆಗೆ ಸೇರಿಸಲಾಗಿದೆ.

ಮೊಯಿಲಿ ಇರುವವರೆಗೂ ಭಿನ್ನಮತ ತಪ್ಪಿದ್ದಲ್ಲ: ಅಜೀಜ್ ಸೇಠ್‌

ಮೈಸೂರು, ಜೂನ್ 19– ‘ವೀರಪ್ಪ ಮೊಯಿಲಿ ಮುಖ್ಯಮಂತ್ರಿ ಆಗಿರುವವರೆಗೂ ಭಿನ್ನಮತ ಇದ್ದದ್ದೇ’ ಎಂದು ಮಾಜಿ ಸಚಿವ ಹಾಗೂ ಟಿಪ್ಪು ದ್ವಿಶತಮಾನೋತ್ಸವ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಅಜೀಜ್ ಸೇಠ್ ಅವರು ಇಂದು ಇಲ್ಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.