
ಪ್ರಜಾವಾಣಿ ವಾರ್ತೆ
75 ವರ್ಷಗಳ ಹಿಂದೆ ಈ ದಿನ
ವಾಷಿಂಗ್‌ಟನ್,ಡಿ.27–ಕೊರಿಯಾ ಬಿಕ್ಕಟ್ಟನ್ನು ಎದುರಿಸಲು ಮುಂದಿನ ಪ್ರಯತ್ನವಾಗಿ, ಸ್ವತಂತ್ರ ರಾಷ್ಟ್ರಗಳು ಕಮ್ಯುನಿಸ್ಟ್ ಚೀಣದ ಮೇಲೆ ಆರ್ಥಿಕ ಬಹಿಷ್ಕಾರ ಹಾಕುವ ಸಲಹೆಯೊಂದನ್ನು ಅಮೆರಿಕಾ ಪರಿಶಿಲಿಸುತ್ತಿದೆ ಎಂದು ವರದಿಯಾಗಿದೆ.
‘ಯುದ್ಧಸ್ತಂಭನ’ದ ಮನವಿಗೆ ಪೀಕಿಂಗ್ ಸರ್ಕಾರವು ನಕಾರವೆತ್ತಿದೆಯಷ್ಟೆ. ತತ್ಫಲವಾಗಿ, ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯು ಸೂಕ್ತ ಕಾರ್ಯಕ್ರಮ ಕೈಗೊಳ್ಳಲು ಅಮೆರಿಕಾ ನಿರ್ದಿಷ್ಟ ಸಲಹೆಗಳನ್ನು ಕೊಡಲಿದೆಯೆಂದು ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.