75 ವರ್ಷಗಳ ಹಿಂದೆ
ನವದೆಹಲಿ, ಸೆಪ್ಟೆಂಬರ್ 1– ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಆಚಾರ್ಯ ಜೆ.ಬಿ. ಕೃಪಲಾನಿ ಅವರು, ಜಯಭೇರಿ ಬಾರಿಸುವ ಸಾಧ್ಯತೆಯಿದೆ.
ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಚಲಾವಣೆ ಆಗಿರುವ ಮತಗಳ ಎಣಿಕೆ ಕಾರ್ಯ ಇಂದು ಆರಂಭವಾಗಿದ್ದು, ಕೃಪಲಾನಿ ಅವರು 1,321 ಮತ ಪಡೆದಿದ್ದರೆ, ಪ್ರತಿಸ್ಪರ್ಧಿ ಪುರುಷೋತ್ತಮ ದಾಸ್ ಟಂಡನ್ 1,263 ಮತಗಳನ್ನು ಪಡೆದಿದ್ದಾರೆ. ಆದರೆ, ಕರ್ನಾಟಕದಲ್ಲಿ ಚಲಾವಣೆ ಆಗಿರುವ 60 ಮತಗಳು ಇನ್ನೂ ದೆಹಲಿಯ ಅಂಗಳಕ್ಕೆ ತಲುಪಿಲ್ಲ. ಈ ಬ್ಯಾಲೆಟ್‌ಗಳು ದೆಹಲಿ ತಲುಪಿದ ಬಳಿಕ ಎಣಿಕೆ ಕಾರ್ಯ ನಡೆಯಲಿದ್ದು, ನಾಳೆ ಅಧಿಕೃತವಾಗಿ ಫಲಿತಾಂಶ ಘೋಷಿಸುವ ಸಾಧ್ಯತೆಯಿದೆ.
ಅಸ್ಸಾಂಗೆ ನೆಹರೂ ಭೇಟಿ
ನವದೆಹಲಿ, ಸೆಪ್ಟೆಂಬರ್ 1– ಪ್ರಧಾನಿ ಪಂಡಿತ್ ನೆಹರೂ ಅವರು, ಮೂರು ದಿನಗಳ ಅಸ್ಸಾಂ ಭೇಟಿಗೆ ತೆರಳಲಿದ್ದಾರೆ. ಸೋಮವಾರ ಬೆಳಿಗ್ಗೆ ವಿಮಾನದ ಮೂಲಕ ಗುವಾಹಟಿಗೆ ಪ್ರಯಾಣ ಆರಂಭಿಸಲಿದ್ದಾರೆ.
ಭೂಕಂಪನದಿಂದ ನಾಶವಾಗಿರುವ ಸ್ಥಳಗಳಿಗೆ ಅವರು ಭೇಟಿ ನೀಡಲಿದ್ದಾರೆ. ಇತರೆ ಸ್ಥಳಗಳಲ್ಲಿ ವೈಮಾನಿಕ ವೀಕ್ಷಣೆ ಮಾಡಲಿದ್ದಾರೆ. ಪ್ರಧಾನಿ ಅವರ ಜೊತೆಯಲ್ಲಿ ಕೇಂದ್ರ ಕೈಗಾರಿಕಾ ಸಚಿವ ಹರೇಕೃಷ್ಣ ಮತ್ತು ವಿದೇಶಾಂಗ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಎಸ್. ದತ್ತ ತೆರಳಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.