
ಪ್ರಜಾವಾಣಿ ವಿಶೇಷ
ವಾಷಿಂಗ್‌ಟನ್, ಫೆ. 2– ಒಬ್ಬ ಶ್ವೇತ ಜನಾಂಗದ ಸ್ತ್ರೀ ಮಾನಭಂಗ ಮಾಡಿದ ಕಾರಣಕ್ಕಾಗಿ ಮರಣದಂಡನೆಗೆ ಗುರಿ ಮಾಡಲ್ಪಟ್ಟಿದ್ದ ನೀಗ್ರೊಗಳು ಆ ಆಜ್ಞೆ ತಡೆಯಲು ಹಾಕಿದ್ದ ಅಪೀಲ್ ಅರ್ಜಿಯನ್ನು ಅಮೆರಿಕದ ಸುಪ್ರೀಂ ಕೋರ್ಟ್ ಇಂದು ನಿರಾಕರಿಸಿತು. ಇವರಲ್ಲಿ ನಾಲ್ಕು ಮಂದಿ ಇನ್ನು ಆರು ಗಂಟೆಗಳಲ್ಲಿ ಮರಣದಂಡನೆಗೆ ಗುರಿಯಾಗಲಿದ್ದಾರೆ.
ವರ್ಜೀನಿಯದ ಮಾರ್ಟನ್ಸ್ ವಿಲ್‌ನಲ್ಲಿನ ಈ ನೀಗ್ರೊಗಳಿಗೆ ನಿನ್ನೆ ರಾತ್ರಿ ಮರಣದಂಡನೆ ತಡ ಮಾಡಲು ವಾಷಿಂಗ್‌ಟನ್ನಿನಲ್ಲಿ ನೀಗ್ರೊ ವಕೀಲರು ಮಧ್ಯರಾತ್ರಿ ವಾದಿಸಿದುದನ್ನು ಕೇಳಿದ ನಂತರವೂ ಇಂದು ಶ್ರೇಷ್ಠ ನ್ಯಾಯಾಧೀಶ ಫ್ರೆಡ್ ಎಂ. ವಿನ್‌ಸನ್ ಅವರು ಮನವಿಯನ್ನು ತಿರಸ್ಕರಿಸಿದರು.
ರಷ್ಯ ಮತ್ತು ಕಮ್ಯುನಿಸ್ಟ್ ಚೀಣಾದಿಂದ ಸಹಾ ಈ ಆಜ್ಞೆಯನ್ನು ಪ್ರತಿಭಟಿಸಿ ಕೆಲವು ತಂತಿಗಳು ಬಂದಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.