
ಪ್ರಜಾವಾಣಿ ವಾರ್ತೆ
75 ವರ್ಷಗಳ ಹಿಂದೆ ಈ ದಿನ
ಅಮರಾವತಿ, ಡಿ. 30– ನಗರವಾಸಿಗಳಿಗೆ ದೊರೆಯುತ್ತಿ ರುವಂತೆಯೇ ಗ್ರಾಮಸ್ಥರಿಗೂ ಅನುಕೂಲಗಳು ದೊರೆಯಲು ರಾಷ್ಟ್ರೀಯ ಶಿಕ್ಷಣ ವ್ಯವಸ್ಥೆಯನ್ನು ಸೂಕ್ತವಾಗಿ ಮಾರ್ಪಡಿಸಬೇಕು ಎಂದು ರಾಷ್ಟ್ರಾಧ್ಯಕ್ಷ ಡಾ. ರಾಜೇಂದ್ರ ಪ್ರಸಾದರು ಇಂದು ತಿಳಿಸಿದರು.
ಶ್ರೀಶಿವಾಜಿ ಲೋಕ ವಿದ್ಯಾಪೀಠದ ಉದ್ಘಾಟನೆ ನಡೆಸುತ್ತಾ, ಡೆನ್ಮಾರ್ಕ್, ನಾರ್ವೆ, ಸ್ವೀಡನ್ ಮುಂತಾದ ಪಾಶ್ಚಾತ್ಯ ರಾಷ್ಟ್ರಗಳು ಶಿಕ್ಷಣ ವ್ಯವಸ್ಥೆಯ ಮೂಲಕ ಅಜ್ಞಾನವನ್ನೂ, ನಿರಕ್ಷರತೆಯನ್ನೂ ಸಂಪತ್ತಿನಲ್ಲಿ ವಿಷಮತೆಗಳನ್ನೂ ತೊಡೆದು ಹಾಕಿವೆ ಎಂದು ಡಾ. ಪ್ರಸಾದರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.