ಬೆಂಗಳೂರು, ಸೆ. 30– ಬೆಂಗಳೂರು ಕಾರ್ಪೊರೇಷನ್‌ನ ನಿಯೋಗವೊಂದು ಇಂದು ಹಣಕಾಸು ಸಚಿವ ಎಚ್.ಸಿ. ದಾಸಪ್ಪ ಮತ್ತು ಸ್ಥಳೀಯ ಸಂಸ್ಥೆಗಳ ಸಚಿವ ಆರ್. ಚೆನ್ನಿಗರಾಮಯ್ಯ ಅವರನ್ನು ಕಂಡು, ಮನರಂಜನೆ ತೆರಿಗೆ ವಿಧಿಸುವ ಅಧಿಕಾರವನ್ನು ಕಾರ್ಪೊರೇಷನ್‌ಗೆ ಕೊಡಬೇಕೆಂದೂ, ಕಾರ್ಪೊರೇಷನ್ ಪ್ರದೇಶದಲ್ಲಿ ನಡೆಸಲಾಗುವ ಮಾರಾಟ ತೆರಿಗೆಯಲ್ಲಿ ಒಂದು ಭಾಗ ಕೊಡಬೇಕೆಂದು ಪ್ರಾರ್ಥನೆ ಮಾಡಿಕೊಂಡಿತು.
ಸೇವಾದಳಗಳ ಕಾರ್ಯಕ್ಕೆ ನೆಹರೂ ಮೆಚ್ಚುಗೆ
ನವದೆಹಲಿ, ಸೆ. 30– ಭಾರತದ ವೈಮಾನಿಕ ದಳವು ಏಷ್ಯಾದಲ್ಲೂ ಮತ್ತು ಸೇನಾ ದಳವು ಅಸ್ಸಾಂ ಹಾಗೂ ಕಾಶ್ಮೀರದಲ್ಲಿ ಪ್ರವಾಹ ತಡೆಗಟ್ಟುವ ಕಾರ್ಯದಲ್ಲಿ, ನಷ್ಟ ಸರಿಪಡಿಸುವು ದರಲ್ಲಿ, ಸಂತ್ರಸ್ತರಿಗೆ ನೆರವು ನೀಡುವುದರಲ್ಲಿ ಸಾಧಿಸಿದ ಮಹತ್ಕಾರ್ಯಕ್ಕಾಗಿ ಪ್ರಧಾನಿ ನೆಹರೂ ಅವರು, ಪತ್ರಿಕಾಗೋಷ್ಠಿಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.