ADVERTISEMENT

75 ವರ್ಷಗಳ ಹಿಂದೆ | ಆಹಾರ ಅಭಾವ ಸಾಧ್ಯತೆ: ಸಿಎಂ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 23:30 IST
Last Updated 28 ಸೆಪ್ಟೆಂಬರ್ 2025, 23:30 IST
<div class="paragraphs"><p>75 ವರ್ಷಗಳ ಹಿಂದೆ ಈ ದಿನ</p></div>

75 ವರ್ಷಗಳ ಹಿಂದೆ ಈ ದಿನ

   

75 ವರ್ಷಗಳ ಹಿಂದೆ; ಶುಕ್ರವಾರ, 29–9–1950

ಬೆಂಗಳೂರು, ಸೆ. 28– ‘ಕೇಂದ್ರ ಸರ್ಕಾರದಿಂದ ಹೆಚ್ಚುವರಿ ಆಹಾರ ಧಾನ್ಯ  ಪೂರೈಕೆಯಾಗದಿದ್ದರೆ ಈ ವರ್ಷದ ಅಂತ್ಯದಲ್ಲಿ ಮೈಸೂರು ರಾಜ್ಯದಲ್ಲಿ ಆಹಾರದ ಕೊರತೆ ತಲೆದೋರುವ ಸಾಧ್ಯತೆಯಿದೆ’ ಎಂದು ಮುಖ್ಯಮಂತ್ರಿ ಕೆ.ಸಿ. ರೆಡ್ಡಿ ತಿಳಿಸಿದ್ದಾರೆ.

ADVERTISEMENT

ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ವಿವಿಧ ಪ್ರದೇಶಗಳಲ್ಲಿ ತಲೆದೋರಿದ್ದ ಆಹಾರ ಅಭಾವದ ಬಗ್ಗೆ ಮಾಹಿತಿ ನೀಡಿದರು. ‘ಸದ್ಯ ಆ ಪ್ರದೇಶಗಳಲ್ಲಿ ಆಹಾರದ ಪರಿಸ್ಥಿತಿ ಸುಧಾರಿಸುತ್ತಿದೆ’ ಎಂದು ಹೇಳಿದರು.

‘ಆ ಪ್ರದೇಶಗಳಿಗೆ ಇತ್ತೀಚೆಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮಳೆ ಕೊರತೆಯಿಂದಾಗಿ ಬಿತ್ತನೆ ಕಾರ್ಯ ವಿಳಂಬವಾಗಿದೆ. ರಾಗಿ ಇನ್ನೂ ಬಿತ್ತನೆಯಾಗಿಲ್ಲ. ಬಿಳಿಜೋಳ ಬಿತ್ತನೆಯಾಗಿದೆ’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.