
ಪ್ರಜಾವಾಣಿ ವಾರ್ತೆ
ಜಾರ್ಜಿಯಾ, ಜ. 21– ಜಾರ್ಜಿಯಾದ ಪಾಠಶಾಲೆಗಳಲ್ಲಿ ಬಿಳಿಯ ಮತ್ತು ವರ್ಣೀಯ ವಿದ್ಯಾರ್ಥಿಗಳನ್ನು ಒಟ್ಟಿಗೆ ಸೇರಿಸಿದ್ದಲ್ಲಿ ಅಂತಹ ಪಾಠಶಾಲೆಗಳಿಗೆ ಸರ್ಕಾರ ಕೊಡುತ್ತಿರುವ ಎಲ್ಲಾ ಸಹಾಯಗಳನ್ನೂ ನಿಲ್ಲಿಸಲಾಗುವುದೆಂದೂ, ಈ ಅವಕಾಶ ಪಡೆಯುವ ಮಸೂದೆಯನ್ನು ಗೌರ್ನರ್ ಹೆರ್‌ಮನ್‌ತಲ್ ಮಾಡ್ಗೆಯವರು ಶಾಸನಸಭೆಗೆ ಕಳುಹಿಸಿದ್ದಾರೆ.
ಯೂನಿವರ್ಸಿಟಿಗಳಲ್ಲಿಯೂ ಇದೇ ರೀತಿಯ ಮಾರ್ಪಾಡು ಮಾಡಲಾಗಿದೆಯೆಂದು ಗೊತ್ತಾಗಿದೆ.
ಮುಂಬೈಗೆ ನೆಹರೂ ಆಗಮನ
ಮುಂಬಯಿ, ಜ. 21– ಕಾಮನ್‌ವೆಲ್ತ್ ಪ್ರಧಾನಿಗಳ ಸಮ್ಮೇಳನದಲ್ಲಿ ಭಾಗವಹಿಸಲು ಲಂಡನ್‌ಗೆ ತೆರಳಿದ್ದ ಪ್ರಧಾನಿ ಜವಾಹರಲಾಲ್ ಅವರು ಈ ದಿನ ಮಧ್ಯಾಹ್ನ 1 ಗಂಟೆ 40 ನಿಮಿಷಕ್ಕೆ ವಿಮಾನದ ಮೂಲಕ ಮುಂಬಯಿಗೆ ಹಿಂತಿರುಗಿ ಬಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.