ADVERTISEMENT

75 ವರ್ಷಗಳ ಹಿಂದೆ: ‘ಆಹಾರ’ದೊಂದಿಗೆ ಚೆಲ್ಲಾಟವಿಲ್ಲ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 1:18 IST
Last Updated 9 ಡಿಸೆಂಬರ್ 2025, 1:18 IST
   

ನವದೆಹಲಿ, ಡಿ. 8– ಇನ್ನು ಆರು ತಿಂಗಳ ಕಾಲ ಪ್ರತಿನಿತ್ಯವೂ ಆಹಾರ ಧಾನ್ಯ ತುಂಬಿದ ಹಡಗುಗಳು ಭಾರತದ ಬಂದರುಗಳಿಗೆ ಬರುತ್ತಿರುತ್ತವೆ ಎಂಬುದಾಗಿ ಅರ್ಥ ಸಚಿವ ದೇಶಮುಖ್‌ ಇಂದು ಪಾರ್ಲಿಮೆಂಟಿನಲ್ಲಿ ನುಡಿದರು.

ದೇಶದ ಆಹಾರ ಪರಿಸ್ಥಿತಿಗೆ ಬಾಧಕವಾಗುವಂತಹ ಯಾವ ಸಂದಿಗ್ಧಕ್ಕೂ ಎಡೆಕೊಡಲು ತಾವು ಹಿಂಜರಿಯಬೇಕಾಗಿದೆಯೆಂದರು. ಮುಂದುವರಿದು, ‘ಅದೃಷ್ಟವಶಾತ್‌ ಆಹಾರಾಮದಿಗೆ ತಕ್ಕಷ್ಟು ವಿನಿಮಯ ಸೌಕರ್ಯವಿದೆ’ ಎಂದು ಪಾರ್ಲಿಮೆಂಟಿಗೆ ಭರವಸೆಯಿತ್ತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT