
ಪ್ರಜಾವಾಣಿ ವಿಶೇಷ
ಭಾರತ–ಇಂಡೊನೇಷಿಯ ಮೈತ್ರಿ ಒಪ್ಪಂದಕ್ಕೆ ಸಹಿ
ಜಕಾರ್ತಾ, ಮಾ. 3– ಭಾರತ–ಇಂಡೊನೇಷಿಯ ನಡುವೆ ಶಾಂತಿ ಮತ್ತು ಚಿರಸಖ್ಯವಿರಲೋಸುಗ ಇಂಡೊನೇಷಿಯವು ಭಾರತದೊಂದಿಗೆ ಸೌಹಾರ್ದ ಒಪ್ಪಂದಕ್ಕೆ ಈ ದಿನ ಇಲ್ಲಿ ಸಹಿ ಹಾಕಿತು.
ಒಪ್ಪಂದಕ್ಕೆ ಸಹಿ ಹಾಕಿದ ಮೇಲೆ ಇಂಡೊನೇಷಿಯದ ವಿದೇಶಾಂಗ ಸಚಿವ ಡಾ. ಮಹಮದ್ ರೋಯೆಮ್‌ರು ಭಾರತದ ರಾಯಭಾರಿ ಡಾ. ಪಿ. ಸುಬ್ಬರಾಯನ್ ರೊಡನೆ ಕೈಕುಲುಕುತ್ತ ಅನೇಕ ಶತಮಾನಗಳಿಂದ ಭಾರತ– ಇಂಡೊ ನೇಷಿಯಾವನ್ನು ಬಂಧಿಸಿದ್ದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಬಂಧನಗಳನ್ನು ನೆನಪಿಸಿ, ಇಂಡೊನೇಷಿಯದ ಸ್ವಾತಂತ್ರ್ಯ ಸಮರದಲ್ಲಿ ಭಾರತ ನೀಡಿದ ನೆರವನ್ನು ಒತ್ತಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.