ADVERTISEMENT

75 ವರ್ಷಗಳ ಹಿಂದೆ: ಭಾರತ–ಪಾಕಿಸ್ತಾನ ವ್ಯಾಪಾರ ಒಪ್ಪಂದಕ್ಕೆ ಸಹಿ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 23:30 IST
Last Updated 26 ಫೆಬ್ರುವರಿ 2026, 23:30 IST
   

ಕರಾಚಿ, ಫೆ. 26– ಭಾರತ–ಪಾಕಿಸ್ತಾನ ವಾಣಿಜ್ಯ ಒಪ್ಪಂದಕ್ಕೆ ನಿನ್ನೆ ಮಧ್ಯಾನ್ಹ ನಾಲ್ಕು ಗಂಟೆಗೆ ಇಲ್ಲಿ ಸಹಿ ಬಿತ್ತು. ನಿನ್ನೆ ದಿನ ಸೇರಿದ್ದ ಪಾಕಿಸ್ತಾನ ಮಂತ್ರಿಮಂಡಳದ ಸಭೆಯು ಒಪ್ಪಂದವನ್ನು ಅನುಮೋದಿಸಿತು. ಭಾರತದ ಮಂತ್ರಿಮಂಡಳವೂ ಅನುಮೋದಿಸಿದ ಮೇಲೆ ಸೋಮವಾರ ಸಂಜೆ ಐದು ಗಂಟೆಗೆ ಒಪ್ಪಂದವನ್ನು ದೆಹಲಿ–ಕರಾಚಿಗಳೆಡರಲ್ಲೂ ಏಕಕಾಲಕ್ಕೆ ಪ್ರಕಟಿಸಲಾಯಿತು.

ಕರಾಚಿ–ಪ್ರಕಟಣೆ: ‘ಭಾರತ–ಪಾಕಿಸ್ತಾನಗಳ ನಡುವೆ ನಡೆಯುತ್ತಿದ್ದ ವಾಣಿಜ್ಯದ ಮಾತುಕತೆಗಳು ಈ ದಿನ ಮುಕ್ತಾಯವಾದವು. ಹಣವನ್ನು ಕೊಡುವ ವಿಧಾನವನ್ನೂ ಸೇರಿ ಎಲ್ಲ ವಿಷಯಗಳಲ್ಲೂ ತೃಪ್ತಿಕರವಾದ ಒಪ್ಪಂದಕ್ಕೆ ಬರಲಾಗಿದೆ. ಈ ಒಪ್ಪಂದದ ಪ್ರಕಾರ ಭಾರತವು ಕಲ್ಲಿದ್ದಲು, ಉಕ್ಕು, ಬಟ್ಟೆ ಮತ್ತು ಸಿಮೆಂಟ್‌ಗಳನ್ನೂ – ಪಾಕಿಸ್ತಾನವು ಕಚ್ಚಾ ಸೆಣಬು, ಕಚ್ಚಾ ಹತ್ತಿ ಮತ್ತು ಆಹಾರ ಧಾನ್ಯಗಳನ್ನೂ ಮುಖ್ಯವಾಗಿ ರಫ್ತು ಮಾಡುವವು. ಎರಡು ದೇಶಗಳಿಂದಲೂ ಅನೇಕ ವಸ್ತುಗಳನ್ನು ಒ‍ಪನ್ ಜನರಲ್ ಲೈಸೆನ್ಸ್‌ನಂತೆ ರಫ್ತು ಮಾಡಲಾಗುವುದು’ ಎಂದು ಎರಡೂ ರಾಷ್ಟ್ರಗಳ ನಿಯೋಗಗಳ ನಾಯಕರು ಒಪ್ಪಂದಕ್ಕೆ ಸಹಿ ಬಿದ್ದ ಮೇಲೆ ಪ್ರಕಟಣೆ ಹೊರಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT