
ಪ್ರಜಾವಾಣಿ ವಾರ್ತೆದೆಹಲಿ, ಅ. 31– ಏನೇ ಆಗಲಿ ಭಾರತದ ಮಹಾ ಚುನಾವಣೆಗಳು 1951ರ ಮೇ ತಿಂಗಳ ಅಂತ್ಯದೊಳಗೆ ಮುಗಿಯಲೇಬೇಕು ಎಂಬುದಾಗಿ ಭಾರತದ ಪ್ರಧಾನಿ ಪಂಡಿತ್ ನೆಹರೂರವರು, ಇಂದು ದೆಹಲಿಯಲ್ಲಿ ನೆರೆದಿರುವ ಎಲ್ಲಾ ಸಂಸ್ಥಾನಗಳ ಮುಖ್ಯ ಚುನಾವಣಾಧಿಕಾರಿಗಳನ್ನು ಉದ್ದೇಶಿಸಿ ತಿಳಿಸಿದರು.
ಬೇಸಿಗೆ ಮತ್ತು ಸುಗ್ಗಿ ಕಾಲದಲ್ಲಿ ಚುನಾವಣೆಗಳನ್ನು ನಡೆಸುವುದು ಕಷ್ಟವೆಂದು ಕೆಲವರು ಸೂಚಿಸಿದ್ದ ಅಭಿಪ್ರಾಯವನ್ನು ಪ್ರಸ್ತಾಪಿಸಿದ ನೆಹರೂರವರು, ಹವಾಮಾನ ವೈವಿಧ್ಯತೆ ಮತ್ತು ಕಾಲದೋಷ ಗಳೊಂದಿಗೂ ಮಹಾಚುನಾವಣೆಗಳಿಗೆ ಅಡ್ಡಿಯಾಗಕೂಡದು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.