ADVERTISEMENT

75 ವರ್ಷಗಳ ಹಿಂದೆ: ರೈಲ್ವೆ ಪಾಸುಗಳ ದರ ಏರಿಸುವುದಿಲ್ಲವೆಂಬ ಭರವಸೆ

1951ರ ಮಾರ್ಚ್‌ 2, ಶುಕ್ರವಾರ

ಪ್ರಜಾವಾಣಿ ವಿಶೇಷ
Published 2 ಮಾರ್ಚ್ 2026, 0:21 IST
Last Updated 2 ಮಾರ್ಚ್ 2026, 0:21 IST
   

ರೈಲ್ವೆ ಪಾಸುಗಳ ದರ ಏರಿಸುವುದಿಲ್ಲವೆಂಬ ಭರವಸೆ

ನವದೆಹಲಿ, ಮಾ. 1– ರಿಯಾಯಿತಿ ದರದ ರೈಲ್ವೆ ಪಾಸುಗಳಿಗೆ ದರ ಏರಿಕೆಯನ್ನು ಅನ್ವಯಿಸಕೂಡದೆಂಬ ಸೂಚನೆಯನ್ನು ಅಂಗೀಕರಿಸುವ ಮೂಲಕ ರೈಲ್ವೆ ಸಚಿವ ಎ. ಗೋಪಾಲಸ್ವಾಮಿ ಅಯ್ಯಂಗಾರ್ಯರು ಈ ದಿನ ಪಾರ್ಲಿಮೆಂಟಿನಲ್ಲಿ ವಿಸ್ಮಯ ಪ್ರಸಂಗಕ್ಕೆ ಕಾರಣರಾದರು.

ಬೆಳಗ್ಗೆ ಪ್ರಶ್ನೋತ್ತರ ಕಾಲದಲ್ಲಿ ಸಚಿವ ಅಯ್ಯಂಗಾರ್‌ ಮತ್ತು ಸಹ ಸಚಿವ ಕೆ. ಸಂತಾನಂರವರು ಉತ್ತರ ಕೊಡುತ್ತ ಕಲ್ಕತ್ತ, ಮದರಾಸ್‌, ಮುಂಬೈ ಸಬ್‌ ಅರ್ಬನ್ ರೈಲ್ವೆಗಳ ಸೀಜನ್‌ ಪಾಸುಗಳಿಗೆ ಈ ದರ ಏರಿಕೆ ಅನ್ವಯಿಸುವುದಿಲ್ಲ ಎಂದು ತಿಳಿಸಿದರು.

ADVERTISEMENT

ರತ್ನಪ್ಪ ಕುಂಬಾರ (ಮುಂಬೈ) ಅವರು ಮಾತನಾಡಿ, ‘ವಿದ್ಯಾರ್ಥಿ ಗಳೂ ಅದೇ ಪರಿಸ್ಥಿತಿಯಲ್ಲಿ ಇರುವ ರೆಂದೂ ಅವರಿಗೆ ಅನುಕೂಲ ಮಾಡಿ ಕೊಡಬೇಕು’ ಎಂದು ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.