ADVERTISEMENT

75 ವರ್ಷಗಳ ಹಿಂದೆ ಈ ದಿನ: ಭಾರತದ ರಫ್ತು ಬಟ್ಟೆ ಬಗ್ಗೆ ವಿದೇಶಿ ಗಿರಾಕಿಗಳ ದೂರುಗಳು

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 23:30 IST
Last Updated 15 ಫೆಬ್ರುವರಿ 2026, 23:30 IST
<div class="paragraphs"><p>75 ವರ್ಷಗಳ ಹಿಂದೆ ಈ ದಿನ</p></div>

75 ವರ್ಷಗಳ ಹಿಂದೆ ಈ ದಿನ

   

ನವದೆಹಲಿ, ಫೆ. 15– ವಿದೇಶಿ ಗಿರಾಕಿ ಗಳು ಭಾರತದ ಬಟ್ಟೆಗಳ ದರ್ಜೆ, ಪ್ಯಾಕಿಂಗ್‌ ಮತ್ತು ಬೆಲೆಗಳ ವಿಚಾರ ದಲ್ಲಿ ಎಂಟು ವಿಧವಾದ
ಆಪಾದನೆಗಳನ್ನು ಮಾಡಿದ್ದಾರೆ ಎಂಬುದಾಗಿ ಭಾರತದ ವಾಣಿಜ್ಯ ಮತ್ತು ಕೈಗಾರಿಕಾ ಶಾಖೆಯ ಉಪ ಸಚಿವ ಡಿ.ಪಿ. ಕರಮರಕರ್‌ರವರು ಇಂದು ಪಾರ್ಲಿಮೆಂಟಿನಲ್ಲಿ ನುಡಿದರು.

ಎ.ಸಿ. ಗುಹಾರವರ
ಪ್ರಶ್ನೆಯೊಂದಕ್ಕೆ ಉತ್ತರ ಕೊಡುತ್ತ ಆ ಎಂಟು ಆಪಾದನೆಗಳ ಪಟ್ಟಿಯನ್ನು ತಿಳಿಸಿದರು. 1. ಮುಂಚೆ ತೋರಿಸಿದ್ದ ಮಾದರಿಗಳಿಗಿಂತ ಆಮೇಲೆ ಕಳಿಸಿದ ಮಾಲು ಕಮ್ಮಿ ದರ್ಜೆಯದು.
2. ಗಜ ಲೆಕ್ಕ ಗುರ್ತು ಹಾಕಿದ್ದಕ್ಕಿಂತ ಕಮ್ಮಿಯಿದೆ. 3. ಬಣ್ಣ ಸರಿಯಾಗಿ ಹಾಕಿಲ್ಲ. 4. ನೇಯ್ಗೆಯಲ್ಲಿ ಬಹಳ ತಪ್ಪಿದೆ. 5. ಹಡಗಿಗೆ ಹಾಕಿದ ಮಾಲಿನ ಮಾದರಿ ಕೊಡಲೇ ಇಲ್ಲ. 6. ಬೇಲುಗಳಾಗಿ ಕಟ್ಟಿದ್ದು ಕೂಡ ಸರಿಯಾಗಿಲ್ಲ. 7. ಅನಗತ್ಯವಾದ ಮತ್ತು ಓದಲಾಗದಂತಹ ಅನೇಕ ಗುರ್ತುಗಳನ್ನು ಬೇಲುಗಳ ಮೇಲೆ ಹಾಕಿದ್ದರಿಂದ ಮಾಲು
ಮುಟ್ಟಬೇಕಾದ ಸ್ಥಳಕ್ಕೆ ಹೋಗಲೇ ಇಲ್ಲ. 8. ಒರಟು ಮತ್ತು ಮಧ್ಯಮ
ದರ್ಜೆಯ ಬಟ್ಟೆಗಳ ಮೇಲೆ ರಫ್ತುದಾರರು ಪ್ರೀಮಿಯಂ ಛಾರ್ಜ್‌ ಮಾಡುತ್ತಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.