ADVERTISEMENT

50 ವರ್ಷಗಳ ಹಿಂದೆ | ಬಂಗಾಳದಲ್ಲಿ ಕುಟುಂಬ ಹಿಡುವಳಿ ಮೇಲೆ ಮಿತಿ

ಶನಿವಾರ, 18–7–1970

​ಪ್ರಜಾವಾಣಿ ವಾರ್ತೆ
Published 17 ಜುಲೈ 2020, 21:39 IST
Last Updated 17 ಜುಲೈ 2020, 21:39 IST

‘ಮೂರಕ್ಕೇ’ ನಿಲ್ಲಿಸದ ತಂದೆತಾಯಿಗಳ ಬಗ್ಗೆ ಸರ್ಕಾರದ ಆದೇಶಕ್ಕೆ ತಡೆ
ಬೆಂಗಳೂರು, ಜುಲೈ 17
– 1970 ಜೂನ್‌ ತಿಂಗಳ ಒಂದರ ಸಮಯದಲ್ಲಿ ಮೂರಕ್ಕಿಂತ ಹೆಚ್ಚು ಮಕ್ಕಳಾದ ಅಥವಾ ಮೂರಕ್ಕಿಂತ ಹೆಚ್ಚಿದ್ದು, ಅಲ್ಲಿಗೇ ನಿಲ್ಲಿಸದೇ ಹೋದ ತಂದೆತಾಯಿಗಳ ಮಕ್ಕಳಿಗೆ ಶೈಕ್ಷಣಿಕ ರಿಯಾಯಿತಿಗಳನ್ನು ನಿಲ್ಲಿಸುವ 1969ರ ಆದೇಶವನ್ನು ಸರ್ಕಾರವು ತಡೆಹಿಡಿದಿದೆ.

ಈ ಸಂಬಂಧದಲ್ಲಿ ಶಾಲೆಗಳಿಗೆ ಪಾಲಕರು ಸಲ್ಲಿಸಬೇಕೆಂದಿರುವ ಅರ್ಜಿ ಮತ್ತು ತಿಳಿವಳಿಕೆ ಪತ್ರಗಳಿಗೆ ಶಾಲೆಗಳಲ್ಲಿ ಒತ್ತಾಯಪಡಿಸಬಾರದು ಎಂದು ಗೆಜೆಟ್‌ ಪ್ರಕಟಣೆ ತಿಳಿಸಿದೆ.

ಬಂಗಾಳದಲ್ಲಿ ಕುಟುಂಬ ಹಿಡುವಳಿ ಮೇಲೆ ಮಿತಿ
ಕಲ್ಕತ್ತ, ಜುಲೈ 17–
ಬಂಗಾಳದಲ್ಲಿ ಕುಟುಂಬದ ಜಮೀನು ಹಿಡುವಳಿ ಮೇಲೆ ಸರ್ಕಾರವು ಶಾಸನದ ಕ್ರಮ ಕೈಗೊಳ್ಳುವ ಯೋಚನೆಯಲ್ಲಿದೆ ಎಂದು ಪ್ರಧಾನಿ ಇಂದಿರಾ ಗಾಂಧಿ ಇಂದು ರಾತ್ರಿ ಇಲ್ಲಿ ಪ್ರಕಟಿಸಿದರು.

ADVERTISEMENT

ಕುಟುಂಬ ಹಿಡುವಳಿ ಮಿತಿಗೆ ಶಾಸನ ರಚಿಸುವುದರಿಂದ ಅಸಮತೆ ನಿವಾರಣೆಯಾಗುವುದೇ ಅಲ್ಲದೆ ಭೂಹೀನರಿಗೆ ಹಂಚಲು ಹೆಚ್ಚಿನ ಜಮೀನು ದೊರೆಯುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.