ನವದೆಹಲಿ, ಸೆಪ್ಟೆಂಬರ್ 3– ಕರ್ನಾಟಕದಲ್ಲಿ ಬಡತನ ನಿರ್ಮೂಲನೆಗಾಗಿ ಕ್ರಿಯಾಯೋಜನೆ ರೂಪಿಸುವುದಕ್ಕಾಗಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು, ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷ ಜೈರಾಂ ರಮೇಶ್ ಅವರ ನೇತೃತ್ವದಲ್ಲಿ ಕಾರ್ಯತಂಡವೊಂದನ್ನು ರಚಿಸಿದ್ದಾರೆ.
ಈ ತಂಡವು ಬಡತನ ನಿರ್ಮೂಲನೆಗಾಗಿ ನಾಲ್ಕು ಪ್ರಮುಖ ವಿಷಯಗಳ ಅಧ್ಯಯನ ಮಾಡಲಿದೆ. ಬಡತನಕ್ಕೆ ಸಂಬಂಧಿಸಿದಂತೆ ಅಂತರ ಜಿಲ್ಲಾ ವ್ಯತ್ಯಾಸ. ರಾಜ್ಯದೊಳಗಿನ ವಿವಿಧ ಜಿಲ್ಲೆಗಳಲ್ಲಿನ ಸಾರ್ವಜನಿಕ ವೆಚ್ಚ. ಈಗಾಗಲೇ, ಜಾರಿಯಲ್ಲಿರುವ ಬಡತನ ನಿರ್ಮೂಲನಾ ಕಾರ್ಯಕ್ರಮಗಳ ಪರಿಣಾಮದ ಅಧ್ಯಯನ ಮತ್ತು ಕೃಷಿ ಬಿಟ್ಟು ಇತರ ಗ್ರಾಮೀಣ ಉದ್ಯೋಗ ಸಮೀಕ್ಷೆ ಇವೇ ಆ ನಾಲ್ಕು ವಿಷಯಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.