
ಕಾಸರಗೋಡು, ಜ. 13– ಕರ್ನಾಟಕದೊಂದಿಗೆ ಕಾಸರಗೋಡನ್ನು ವಿಲೀನಗೊಳಿಸುವ ವಿಷಯ ಮುಗಿದ ಅಧ್ಯಾಯ ಎಂದು ಕೇರಳದ ಮುಖ್ಯಮಂತ್ರಿ ಹಾಗೂ ಸಿಪಿಎಂ ಪಾಲಿಟ್ ಬ್ಯೂರೊ ಸದಸ್ಯ ಇ.ಕೆ. ನಾಯನಾರ್ ಇಂದು ಹೇಳಿದ್ದಾರೆ.
ಮಂಗಳೂರಿನಲ್ಲಿ ನಿನ್ನೆ ಕೇಂದ್ರ ಸರ್ಕಾರದ ವಿರುದ್ಧದ ಸಿಪಿಎಂ ಪಕ್ಷದ ಪ್ರತಿಭಟನಾ ರ‍್ಯಾಲಿಯಲ್ಲಿ ಭಾಗವಹಿಸಿ ವಾಪಸಾಗುತ್ತಿದ್ದ ಅವರು, ಇಂದು ಕಾಞಂಗಾಡ್‌ನಲ್ಲಿ ಮಾತನಾಡಿದರು.
ಮಹಾಜನ ಆಯೋಗದ ವರದಿ ಜಾರಿಗೆ ಈಗ ಅರ್ಥವಿಲ್ಲ. ಕಾಸರಗೋಡು ಕೇರಳದ ಅವಿಭಾಜ್ಯ ಅಂಗ. 1956ರಲ್ಲಿ ಆಯಾ ರಾಜ್ಯಗಳ ಗಡಿ ನಿರ್ಣಯವಾದ ನಂತರ ಮತ್ತೆ ಈ ವಿಷಯವನ್ನು ಕೆದಕುವ ಅಗತ್ಯವಿಲ್ಲ. ಬೆಳಗಾವಿಯನ್ನು ಮಹಾರಾಷ್ಟ್ರದೊಂದಿಗೆ ವಿಲೀನ ಮಾಡಬೇಕೆಂದು ಮಹಾರಾಷ್ಟ್ರ ಸರ್ಕಾರವು ಹಲವು ಬಾರಿ ಮಾಡಿದ ಮನವಿಯನ್ನು ಕರ್ನಾಟಕ ತಿರಸ್ಕರಿಸಿದೆ. ಹಾಗಿರುವಾಗ ಕಾಸರಗೋಡು ವಿಲೀನ ಪ್ರಶ್ನೆಯನ್ನು ಈಗ ಎತ್ತುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.