
75 ವರ್ಷಗಳ ಹಿಂದೆ ಈ ದಿನ
ನವದೆಹಲಿ, ಜ. 13– ಉತ್ಪಾದನೆಯ ವೆಚ್ಚವನ್ನು ತಗ್ಗಿಸಿ, ವಿದೇಶಿಯರ ಪೈಪೋಟಿಯನ್ನು ಪರಿಣಾಮಕಾರಿಯಾಗಿ ಎದುರಿಸಲು ಸಕ್ಕರೆ ಕೈಗಾರಿಕೆಯವರು ತಯಾರಾಗಿರಬೇಕೆಂದು ಕೇಂದ್ರದ ಆಹಾರ ಸಚಿವ ಕೆ.ಎಂ. ಮುನ್ಷಿಯವರು ಭಾರತದ ಸಕ್ಕರೆ ಕಾರ್ಖಾನೆಗಳ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಉದ್ಘಾಟಿಸುತ್ತಾ ಇಂದು ಇಲ್ಲಿ ಹೇಳಿದರು.
ಇಂದು ದೇಶದ ಮುಂದಿರುವ ಮೂರು ಸಮಸ್ಯೆಗೂ ಪರಿಹಾರ ಕಾರ್ಯದಲ್ಲಿ ಸರ್ಕಾರದೊಡನೆ ಸಹಕರಿಸಲು ಸಿದ್ಧವಾಗಿದ್ದಲ್ಲಿ ಸಕ್ಕರೆ ಕೈಗಾರಿಕೆಗೆ ಸಾಧ್ಯವಾದಷ್ಟು ವಿಧದಿಂದಲೂ ಸಹಾಯ ಮಾಡಲು ಸರ್ಕಾರ ಸಿದ್ಧವಿರುವುದಾಗಿ ಮುನ್ಷಿ ಭರವಸೆಯಿತ್ತರು.
ಸರ್ಕಾರವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿರುವುದಾಗಿಯೂ, ಬೆಲ್ಲದ ಬೆಲೆ ಪರಮಾವಧಿಯೊಳಗಿರುವಂತೆ ಸೂಕ್ತವಾದ ಕ್ರಮಗಳನ್ನು ಕೈಗೊಳ್ಳುವುದಾಗಿಯೂ ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.