ADVERTISEMENT

25 ವರ್ಷಗಳ ಹಿಂದೆ ಈ ದಿನ: ಕಾಡಿನಲ್ಲಿ ಮಾರನ್‌ ಬಂಧನ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 0:30 IST
Last Updated 16 ಫೆಬ್ರುವರಿ 2026, 0:30 IST
<div class="paragraphs"><p>25 ವರ್ಷಗಳ ಹಿಂದೆ&nbsp;ಈ ದಿನ</p></div>

25 ವರ್ಷಗಳ ಹಿಂದೆ ಈ ದಿನ

   

ಕೊಯಮತ್ತೂರು, ಫೆ. 15– (ಪಿಟಿಐ, ಯುಎನ್‌ಐ)– ಮಹತ್ವದ ಬೆಳವಣಿಗೆ ಯೊಂದರಲ್ಲಿ ತಮಿಳುನಾಡು
ವಿಶೇಷ ಕಾರ್ಯಾಚರಣೆ ಪ‍ಡೆಯವರು ನಿನ್ನೆ ರಾತ್ರಿ ತಮಿಳು ರಾಷ್ಟ್ರೀಯ ವಿಮೋಚನಾ ಸೇನೆಯ (ಟಿಎನ್‌ಎಲ್‌ಎ) ನಾಯಕ ಮಾರನ್‌ನನ್ನು ಬಂಧಿಸಿದ್ದಾರೆ.

ಕಳೆದ ವರ್ಷ ನಡೆದ ವರನಟ
ಡಾ. ರಾಜ್‌ಕುಮಾರ್‌ ಅವರ ಅಪಹರಣದಲ್ಲಿ ಈತ ಮಹತ್ವದ ಪಾತ್ರ ವಹಿಸಿದ್ದ. ಕೊಯಮತ್ತೂರು ಜಿಲ್ಲೆಯ ವಲ್ಲಂಗಿರಿ ಅರಣ್ಯ ಪ್ರದೇಶದ ಸಿರುವಣಿ ಎಂಬಲ್ಲಿ ಎಸ್‌ಟಿಎಫ್‌ನವರ ಕಣ್ಣಿಗೆ ಬಿದ್ದ ಮಾರನ್‌ನನ್ನು ಬೆನ್ನಟ್ಟಿದಾಗ ಆತ ಶರಣಾದ ಎಂದು ಎಸ್‌ಟಿಎಫ್‌ ಐಜಿ ಬಾಲಚಂದ್ರನ್ ಇಂದು ಸಂಜೆ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ಸೇವಾವಧಿ ವಿಸ್ತರಣೆಗೆ ದಿನಕರ್‌ ವಾದ

ಬೆಂಗಳೂರು, ಫೆ. 15– ಕೇಂದ್ರ ತನಿಖಾ ದಳದ (ಸಿಬಿಐ) ನಿರ್ದೇಶಕ ಸ್ಥಾನಕ್ಕೆ ಹೊಸಬರನ್ನು ನೇಮಕ ಮಾಡುವ ಪ್ರಕ್ರಿಯೆಯನ್ನು ತಾವು ನಿವೃತ್ತಿಯಾಗುವುದಕ್ಕಿಂತ (ಈ ತಿಂಗಳು 28) ಮುಂಚಿತವಾಗಿ ಮಾಡಬೇಕು. ಇಲ್ಲವಾದರೆ ತಮ್ಮ ಸೇವಾವಧಿಯನ್ನು ವಿಸ್ತರಿಸಬೇಕು ಎಂದು ಕೋರಿ ರಾಜ್ಯದ ಪೊಲೀಸ್‌ ಮಹಾನಿರ್ದೇಶಕ ಸಿ. ದಿನಕರ್ ಇಂದು ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.