ADVERTISEMENT

ಪ್ರಜಾವಾಣಿ 50 ವರ್ಷಗಳ ಹಿಂದೆ| ಭಾನುವಾರ, 2-1-1972

50 ವರ್ಷಗಳ ಹಿಂದೆ ಭಾನುವಾರ 2.1.1972

​ಪ್ರಜಾವಾಣಿ ವಾರ್ತೆ
Published 1 ಜನವರಿ 2022, 19:31 IST
Last Updated 1 ಜನವರಿ 2022, 19:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಸ್ವತಂತ್ರ ತಾಯಿನಾಡಿಗೆ ಬಾಂಗ್ಲಾ ನಿರಾಶ್ರಿತ ವಾಪಸು ಪ್ರಾರಂಭ

ಬನಗಾಂವ್ (ಪಶ್ಚಿಮ ಬಂಗಾಳ) ಜ. 1– ಸುಮಾರು ಇಪ್ಪತ್ತೈದು ಸಾವಿರ ಮಂದಿ ನಿರಾಶ್ರಿತರು ಇಂದು ಭಾರತಕ್ಕೆ ವಿದಾಯ ಹೇಳಿ ಸ್ವತಂತ್ರ ನಾಡಿಗೆ ಹಿಂದಿರುಗುವ ಹಿಗ್ಗಿನಿಂದ ಮಾತೃಭೂಮಿಗೆ ಪ್ರಯಾಣ ಆರಂಭಿಸಿದರು.

ಇಂದು ಹೊಸ ವರ್ಷದ ಉದಯವಾದಂತೆ ನಿರಾಶ್ರಿತರ ಬಾಳಿನಲ್ಲೂ ಹೊಸ ಅಧ್ಯಾಯದ ಆರಂಭ. ಸೂರ್ಯೋದಯವಾದಂತೆ ಬಾಂಗ್ಲಾ ದೇಶದ ನಿರಾಶ್ರಿತರಲ್ಲಿ ಸ್ವತಂತ್ರ ನಾಡಿಗೆ ಹಿಂದಿರುಗುವ ಸಂಭ್ರಮ ಕಂಡು ಬಂದಿತು. ಎರಡು ವಿಶೇಷ ರೈಲುಗಳು ಇಲ್ಲಿಂದ ಜೆಸ್ಸೂರಿಗೆ ಹೊರಟವು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.