ನವದೆಹಲಿ, ಡಿ. 2– ರಾಷ್ಟ್ರಾಧ್ಯಕ್ಷ ಡಾ. ರಾಜೇಂದ್ರ ಪ್ರಸಾದ್‌ರವರು ಅಖಿಲ ಭಾರತ ಪತ್ರಿಕಾ ಸಂಪಾದಕರ ಪರಿಷತ್ತಿನ 9ನೇ ಅಧಿವೇಶನವನ್ನು ಆರಂಭಿಸುತ್ತ ಪತ್ರಿಕೆಗಳು ಸಂಗತಿಗಳನ್ನು ಯಥಾವತ್ತಾಗಿ ಪ್ರಕಟಿಸಬೇಕೆಂದು ಉಪದೇಶಿಸಿದರು.
ಟೀಕೆ ಟಿಪ್ಪಣಿಗಳನ್ನು ಖಡಾಖಂಡಿತವಾಗಿ ಬರೆಯಬೇಕು. ಆದರೆ, ಅವುಗಳ ಧಾಟಿ ಓದುಗರ ಬುದ್ಧಿಗೆ ಹಿಡಿಯುವಂತಿರಬೇಕೇ ಹೊರತು ಅವರ ಭಾವನೆಗಳನ್ನು ಕೆರಳಿಸುವಂತಿರಬಾರದೆಂದರು.
ಒಟ್ಟಿನಲ್ಲಿ ಈ ದೇಶದ ಪತ್ರಿಕೆಗಳು ಕಷ್ಟತಮವಾದ ಕರ್ತವ್ಯಗಳನ್ನು ಕಷ್ಟ ಕಾಲದಲ್ಲಿ ಬಹುಮಟ್ಟಿಗೆ ಯಶಸ್ವಿಯಾಗಿ ನಿರ್ವಹಿಸುತ್ತಿವೆ ಎಂದರು.
ಮದ್ರಾಸು ಡಿ. 2– ವಿಶ್ವದಲ್ಲೆಲ್ಲಾ ಈಗ ಮೂಡಿರುವ ಬಿಕ್ಕಟ್ಟನ್ನು ಬಗೆಹರಿಸಿ ಯುದ್ಧವನ್ನು ತಪ್ಪಿಸಬೇಕಾದರೆ ಪ್ರಮುಖ ರಾಷ್ಟ್ರಗಳು ಒಪ್ಪಂದವೊಂದಕ್ಕೆ ಬರಬೇಕೆಂದು ಭಾರತದ ರಷ್ಯಾ ರಾಯಭಾರಿ
ಡಾ. ರಾಧಾಕೃಷ್ಣನ್ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.