
ಪ್ರಜಾವಾಣಿ ವಾರ್ತೆದೆಹಲಿ, ಡಿ. 3– ವಾಷಿಂಗ್ಟನ್ ಮಾತುಕತೆಗಳಲ್ಲಿ ಭಾಗವಹಿಸಲು ಭಾರತದ ಪ್ರಧಾನಿ ಪಂಡಿತ್ ನೆಹರೂ ಅವರು ಹೋಗಬಹುದೆಂದು, ಅಥವಾ ಈ ಬಗ್ಗೆ ಅವರನ್ನು ಆಹ್ವಾನಿಸಲಾಗಿದೆಯೆಂದೂ ಪತ್ರಿಕೆಗಳಲ್ಲಿ ಬಂದಿರುವ ವರದಿಗಳು ತೀರಾ ನಿರಾಧಾರ ಆದವುಗಳೆಂಬುದಾಗಿ ಇಂದು ಭಾರತದ ಪ್ರಧಾನಿ ತಿಳಿಸಿದರು.
ಇಂದು ವಿಶ್ವವನ್ನಾವರಿಸಿರುವ ಕಠಿಣ ಪರಿಸ್ಥಿತಿಯ ವಿಚಾರವನ್ನು ಪ್ರಸ್ತಾಪಿಸಿ ಇನ್ನೊಂದು ವಿಶ್ವ ಸಂಗ್ರಾಮಕ್ಕೆ ಎಡೆಮಾಡುವಂತಹ ವಿನಾಶಕರ ಸನ್ನಿವೇಶವನ್ನು ತಡೆಯಲು ರಾಷ್ಟ್ರವೊಂದು ನೀಡಬಹುದಾದ ಸಲಹೆಗಳಿಗಿಂತಲೂ ಪರಿಹಾರ ಸಾಧನೆಯ ಬಗ್ಗೆ ತಳೆಯುವ ಧೋರಣೆಯು ಅತಿಮುಖ್ಯವೆಂದು ನೆಹರೂ ನುಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.