
ಪ್ರಜಾವಾಣಿ ವಾರ್ತೆಪಾಂಡಿಚೆರಿ, ಡಿ. 5– ಪಾಂಡಿಚೆರಿಯ ಮಹರ್ಷಿ ಶ್ರೀಅರಬಿಂದೊ ಘೋಷ್ ಅವರು, ಸೋಮವಾರ ಮಧ್ಯರಾತ್ರಿ ಕಳೆದು 1.30 ಗಂಟೆಗೆ ಶಾಂತವಾಗಿ ನಿರ್ವಾಣವನ್ನು ಹೊಂದಿದರು. ಸುಮಾರು ಎರಡು ವಾರದಿಂದ ಅವರಿಗೆ ಮೂತ್ರಪಿಂಡಗಳ ವ್ಯಾಧಿಯಿದ್ದು, ಡಾ. ಪ್ರಭಾಕರ ಸೇನರಿಂದ ಚಿಕಿತ್ಸೆ ಪಡೆಯುತ್ತಿದ್ದರು.
1872ರ ಆಗಸ್ಟ್ 15ರಂದು ಕಲ್ಕತ್ತೆಯಲ್ಲಿ ಜನಿಸಿದ ಅರಬಿಂದೊ ಅವರು, 1910ರ ಏಪ್ರಿಲ್ ತಿಂಗಳಿನಲ್ಲಿ ಪಾಂಡಿಚೆರಿಗೆ ಬಂದು ಆಶ್ರಮ ಸ್ಥಾಪಿಸಿದ್ದರು. ಅರವಿಂದಾಶ್ರಮವೂ ಮತ್ತು ಪಾಂಡಿಚೆರಿ ನಗರವೂ ಈ ದಿನ ದುಃಖಮಯವಾಗಿ ಮಂಕು ಕವಿದಂತಿದೆ.
ಈ ವರ್ಷದ ಆಗಸ್ಟ್ 15ರಂದು ಅರಬಿಂದೊರವರು ತಮ್ಮ 79ನೇ ವರ್ಧಂತಿಯನ್ನು ಪೂರೈಸಿ ದರು. ನವೆಂಬರ್ 24ರಂದು ಪೂರ್ಣ ಅಧ್ಯಾತ್ಮ ವಿಶ್ರಾಂತಿ ಪಡೆದರು. ಅಂದೇ ಭಕ್ತರಿಗೆ ಅವರು ಅಂತ್ಯದರ್ಶನವಿತ್ತುದುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.