ADVERTISEMENT

25 ವರ್ಷಗಳ ಹಿಂದೆ: ಭಾನುವಾರ 3.11.1996

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2021, 22:30 IST
Last Updated 2 ನವೆಂಬರ್ 2021, 22:30 IST
25 ವರ್ಷಗಳ ಹಿಂದೆ..
25 ವರ್ಷಗಳ ಹಿಂದೆ..   

‘ಕಾಳಾ ದಿನ’ ಆಚರಣೆ ಮತ್ತೊಮ್ಮೆ ವಿಫಲ

ಬೆಳಗಾವಿ, ನ. 2– ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಕಳೆದ ನಾಲ್ಕು ದಶಕಗಳಿಂದ ‘ಹೋರಾಟ’ ಮಾಡಿಕೊಂಡು ಬಂದಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ ಈಗ ಎಲ್ಲ ಅರ್ಥದಲ್ಲಿ ತಬ್ಬಲಿ.

ಒಂದು ಕಡೆ, ದಿನದಿಂದ ದಿನಕ್ಕೆ ಹೆಚ್ಚುತ್ತಿ ರುವ ಆಂತರಿಕ ಬಂಡಾಯದ ಸವಾಲನ್ನು ಎದುರಿಸಲಾಗದೆ ತತ್ತರಿಸಿ ಹೋಗಿರುವ ಸಮಿತಿ ಮತ್ತೊಂದು ಕಡೆ ‘ಬೇಸತ್ತ’ ಜನರನ್ನು ಬಡಿದೆಬ್ಬಿಸುವ ಅಸ್ತ್ರಗಳು ತಿಳಿಯದೇ ತಬ್ಬಿಬ್ಬಾಗಿದೆ. ಬಹುಶಃ ಈ ಎಲ್ಲ ಅಂಶಗಳ ಫಲವಾಗಿಯೇ, ಪ್ರತೀ ರಾಜ್ಯೋತ್ಸವ ದಿನವನ್ನು ‘ಕಪ್ಪು ದಿನ’ವಾಗಿ ಆಚರಿಸ ಬೇಕು ಎಂಬ ಸಮಿತಿ ಕರೆಗೆ ಅವರ ಬೆಂಬಲಿಗರಿಂದಲೇ ಸೂಕ್ತ ಪ್ರತಿಕ್ರಿಯೆ ಸಿಗುತ್ತಿಲ್ಲ. ಶುಕ್ರವಾರದ ಮರಾಠಿ ಪತ್ರಿಕೆಗಳ ಸಂಚಿಕೆಗಳಲ್ಲಿ ಮಾಸ್ಟ್‌ಹೆಡ್ ಮೇಲೆ ಕಾಳಾ ದಿನ ಆಚರಣೆಗೆ ಕರೆ ಕೊಟ್ಟರೂ ಅಂಗಡಿ ಮುಂಗಟ್ಟುಗಳು ತೆರೆದಿದ್ದು ಜನಜೀವನ ಎಂದಿನಂತಿತ್ತು.

ADVERTISEMENT

‘ಕೇಂದ್ರಕ್ಕೆ ಬೆಂಬಲ ವಾಪಸ್ಪಡೆಯದಿದ್ದರೆ ಕಾಂಗ್ರೆಸ್ ನಿರ್ನಾಮ’

ಬೆಂಗಳೂರು, ನ. 2– ಕೇಂದ್ರದಲ್ಲಿ ದೇವೇಗೌಡರ ನೇತೃತ್ವದ ಸಂಯುಕ್ತರಂಗ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು
ಹಿಂತೆಗೆದುಕೊಳ್ಳದಿದ್ದರೆ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ನಿರ್ನಾಮವಾಗುವುದು ಖಚಿತ ಎಂಬ ಎಚ್ಚರಿಕೆಯನ್ನು ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿ.ಕೆ. ನಾಯ್ಕರ್ ಹೈಕಮಾಂಡ್‌ಗೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.