ADVERTISEMENT

ಪ್ರಜಾವಾಣಿಯಲ್ಲಿ 25 ವರ್ಷಗಳ ಹಿಂದೆ: ಶನಿವಾರ 11.1.1997

​ಪ್ರಜಾವಾಣಿ ವಾರ್ತೆ
Published 10 ಜನವರಿ 2022, 19:30 IST
Last Updated 10 ಜನವರಿ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಾವೇರಿ ಕಣಿವೆಗೆ ಮಾರ್ಚ್‌ನಲ್ಲಿ ನ್ಯಾಯಮಂಡಲಿ ಭೇಟಿ ಸಂಭವ

ನವದೆಹಲಿ, ಜ. 10– ಕಾವೇರಿ ಕಣಿವೆ ಪ್ರದೇಶಕ್ಕೆ ಖುದ್ದು ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ಅರಿತುಕೊಳ್ಳುಬೇಕೆಂಬ ರಾಜ್ಯಗಳ ಮನವಿಯನ್ನು ಕಾವೇರಿ ಜಲ ವಿವಾದಗಳ ನ್ಯಾಯಮಂಡಲಿಯ ನೂತನ ಅಧ್ಯಕ್ಷ ನ್ಯಾಯಮೂರ್ತಿ ಎನ್.ಪಿ. ಸಿಂಗ್‌ ಮತ್ತು ಇಬ್ಬರು ಸದಸ್ಯರು ಒಪ್ಪಿದ್ದು, ಬರುವ ಮಾರ್ಚ್‌ನಲ್ಲಿ ಈ ಭೇಟಿ ಕಾರ್ಯಕ್ರಮವನ್ನು ಕೈಗೊಳ್ಳುವ ಇಂಗಿತವನ್ನು ಅವರು ಇಂದು ವ್ಯಕ್ತಪಡಿಸಿದರು.

ನ್ಯಾಯಮಂಡಲಿಯ ಮುಂದೆ ಕೇರಳದ ಪರ ಖ್ಯಾತ ನ್ಯಾಯವಾದಿ ಮಿಲನ್‌ ಬ್ಯಾನರ್ಜಿ ಅವರು ತಮ್ಮ ವಾದವನ್ನು ಮುಂದುವರಿಸಿ, ಕಾವೇರಿ ಕಣಿವೆ ಪ್ರದೇಶಕ್ಕೆ ಖುದ್ದು ಭೇಟಿ ನೀಡಿ ಈ ಪ್ರದೇಶದಲ್ಲಿ ಲಭ್ಯವಿರುವ ನೀರು, ಅಚ್ಚುಕಟ್ಟು ಪ್ರದೇಶಗಳ ವ್ಯಾಪ್ತಿ ಮತ್ತು ಬೆಳೆಗಳ ಬಗೆಗೆ ಅಧ್ಯಯನ ಮಾಡುವುದು ಸೂಕ್ತ ಎಂದು ಮನವಿ ಮಾಡಿದರು.

ADVERTISEMENT

ಆಂಧ್ರ: ನಕ್ಸಲೀಯರಿಂದ ಠಾಣೆ ಸ್ಫೋಟ–18 ಮಂದಿ ಹತ್ಯೆ

ಹೈದರಾಬಾದ್‌, ಜ. 10 (ಪಿಟಿಐ): ಆಂಧ್ರಪ್ರದೇಶ ಖಮ್ಮಂ ಜಿಲ್ಲೆಯಲ್ಲಿ ಇಂದು ಬೆಳಗಿನ ಜಾವ ಪೊಲೀಸರೊಂದಿಗೆ ಭೀಕರ ಕಾಳಗ ನಡೆಸಿದ ನಕ್ಸಲೀಯರು ಪೊಲೀಸ್‌ ಠಾಣೆಯನ್ನು ಸ್ಫೋಟಿಸಿದ್ದರಿಂದ 16 ಪೊಲೀಸರು ಸೇರಿದಂತೆ 18 ಮಂದಿ ಸತ್ತಿದ್ದಾರೆ.

ಪೀಪಲ್ಸ್‌ ವಾರ್‌ ಗ್ರೂಪ್ (ಪಿಡಬ್ಲ್ಯುಸಿ)ಗೆ ಸೇರಿದ ಸುಮಾರು 60 ನಕ್ಸಲೀಯರ ಗುಂಪೊಂದು ಮನುಗುರು ಪಟ್ಟಣ ಬಳಿಯ ಕರಕಗೂಡೆಂ ಪೊಲೀಸ್‌ ಠಾಣೆ ಮೇಲೆ ದಾಳಿ ಮೇಲೆ ದಾಳಿ ನಡೆಸಿ ಪೊಲೀಸ್‌ ಠಾಣೆ ಮೇಲೆ ದಾಳಿ ನಡೆಸಿ ಪೊಲೀಸರ ಮೇಲೆ ಬೇಕಾಬಿಟ್ಟಿಯಾಗಿ ಗುಂಡುಹಾರಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.