ADVERTISEMENT

ಪ್ರಜಾವಾಣಿಯಲ್ಲಿ 25 ವರ್ಷಗಳ ಹಿಂದೆ: ಬುಧವಾರ, 22.1.1997

​ಪ್ರಜಾವಾಣಿ ವಾರ್ತೆ
Published 21 ಜನವರಿ 2022, 15:35 IST
Last Updated 21 ಜನವರಿ 2022, 15:35 IST
   

ಭಾರತಕ್ಕೆ ಬೊಫೋರ್ಸ್‌ ದಾಖಳೆ ಹಸ್ತಾಂತರ

ಬೆರ್ನ್‌,ಜ.21(ಯುಎನ್‌ಐ) – 1.3 ಶತಕೋಟಿ ಡಾಲರ್‌ ಬೊಫೋರ್ಸ್‌ ಬಂದೂಕು ಒಪ್ಪಂದದಲ್ಲಿ ನೀಡಲಾಗಿದೆ ಎನ್ನಲಾದ ರುಷುವತ್ತು ಪಡೆದವರ ಮೇಲೆ ಬೆಳಕು ಚೆಲ್ಲಲಿರುವ 500 ಪುಟಗಳ ರಹಸ್ಯ ಸ್ವಿಸ್‌ ಬ್ಯಾಂಕ್‌ ದಾಖಲೆಗಳನ್ನು ಸ್ವಿಟ್ಜರ್‌ಲ್ಯಾಂಡ್‌ ಸರ್ಕಾರ ಇಂದು ಭಾರತಕ್ಕೆ ಹಸ್ತಾಂತರಿಸಿತು.

ಕಳೆದ ಏಳು ವರ್ಷಗಳಿಂದ ಆಮೆಗತಿಯಲ್ಲಿ ಸಾಗಿದ್ದಬೊಫೋರ್ಸ್‌ರುಷುವತ್ತು ಪ್ರಕರಣ ಇದರಿಂದ ಅಂತಿಮ ಘಟ್ಟಕ್ಕೆ ತಲುಪಿದಂತಾಗಿದೆ.

ADVERTISEMENT

ಸ್ವಿಟ್ಜರ್‌ಲ್ಯಾಂಡ್‌ನ ಬೆರ್ನ್‌ನ ಪಾರ್ಲಿಮೆಂಟ್‌ ಭವನದಲ್ಲಿ ಇಂದು ಮಧ್ಯಾಹ್ನ ಭಾರತೀಯ ಕಾಲಮಾನ 2.30 ಕ್ಕೆ ನಡೆದ ಸಮಾರಂಭದಲ್ಲಿ ಸ್ವಿಸ್‌ ಪೊಲೀಸ್‌ ಇಲಾಖೆಯ ಉಪನಿರ್ದೇಶಕ ರುಡಾಲ್ಫ್‌ ವಿಸ್‌ ಅವರುಸ್ವಿಟ್ಜರ್‌ಲ್ಯಾಂಡ್‌ನ ಭಾರತ ರಾಯಭಾರಿ ಕೆ.ಪಿ ಬಾಲಕೃಷ್ಣನ್‌ಗೆ ಈ ದಾಖಲೆಗಳನ್ನು ಒಪ್ಪಿಸಿದರು.

ಲಾರಿ ಮುಷ್ಕರ ಮತ್ತಷ್ಟು ತೀವ್ರ

ಬೆಂಗಳೂರು, ಜ.21– ನಗರದೊಳಗೆ ಭಾರಿ ಸರಕು ಸಾಗಣೆ ಲಾರಿಗಳ ಪ್ರವೇಶ ಮತ್ತು ಸಂಚಾರದ ಮೇಲೆ ಸಮಯದ ನಿರ್ಬಂಧ ಹೇರಿರುವುದನ್ನು ಪ್ರತಿಭಟಿಸಿ ಲಾರಿ ಮಾಲೀಕರು ನಡೆಸುತ್ತಿರುವ ಮುಷ್ಕರ ಇಂದು ಎರಡನೇ ದಿನ ಪ್ರವೇಶಿಸಿದ್ದು, ಮತ್ತಷ್ಟು ತೀವ್ರಗೊಂಡಿದೆ.

ನಗರಕ್ಕೆ ಸರಕು ತರುವ ಲಾರಿಗಳ ಸಂಖ್ಯೆ ಕಡಿಮೆಯಾಗಿದೆ. ಇಲ್ಲಿಂದ ಮಾಲು ವಾಡಿಕೆಯ ಪ್ರಮಾಣದಲ್ಲಿ ಹೊರ ಹೋಗುತ್ತಿಲ್ಲ. ಮರಳು, ಜಲ್ಲಿ, ಕಲ್ಲು ಮತ್ತು ಇತರ ಕಟ್ಟಡ ನಿರ್ಮಾಣ ವಸ್ತುಗಳನ್ನು ಪೂರೈಸುವ ಲಾರಿಗಳ ಸಂಖ್ಯೆಯೂ ಗಮರ್ನಾಹವಾಗಿ ಇಳಿಮುಖಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.