ADVERTISEMENT

ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ: ಭಾನುವಾರ, 9–7–1977

​ಪ್ರಜಾವಾಣಿ ವಾರ್ತೆ
Published 8 ಜುಲೈ 2022, 19:31 IST
Last Updated 8 ಜುಲೈ 2022, 19:31 IST
   

ಮಿಂಚಿನ ವೇಗದಲ್ಲಿ 32 ಗ್ರಾಮಗಳ ತೆರವು ಕಾರ್ಯ

ಬೆಳಗಾವಿ, ಜುಲೈ 8– ಮಲಪ್ರಭಾ ಜಲಾಶಯದಲ್ಲಿ ನೀರು ಸಂಗ್ರಹಣೆಯಿಂದ ಈಗ ಮುಳುಗಡೆಯಾಗುತ್ತಲಿರುವ ಸವದತ್ತಿ ಹಾಗೂ ಬೈಲಹೊಂಗಲ ತಾಲ್ಲೂಕುಗಳ 32 ಗ್ರಾಮಗಳನ್ನು ತೆರವು ಮಾಡುವ ಕೆಲಸ ಮಿಂಚಿನ ವೇಗದಿಂದ ನಡೆದಿದೆ.

ಈ ಗ್ರಾಮಗಳ ನಿವಾಸಿಗಳನ್ನು ಅವರಿಗಾಗಿಯೇ ಕಟ್ಟಲಾದ ಹೊಸ ಗ್ರಾಮಗಳಿಗೆ ಅಥವಾ ಸವದತ್ತಿಯಲ್ಲಿ ನಿರ್ಮಿಸಲಾದ ತಾತ್ಪೂರ್ತಿಕ ಶಿಬಿರಕ್ಕೆ ಸುವ್ಯ
ವಸ್ಥಿತವಾಗಿ ಸಾಗಿಸುವ ಪ್ರಯತ್ನ ನಡೆದಿದೆ.

ADVERTISEMENT

ಸುಮಾರು 60 ಟ್ರಕ್‌ಗಳು ಹಾಗೂ ಅನೇಕ ಎತ್ತಿನ ಬಂಡಿಗಳು ಗ್ರಾಮಸ್ಥರನ್ನು, ಅವರ ವಸ್ತು, ಒಡವೆಗಳನ್ನು ಸಾಗಿಸುವ ಕಾರ್ಯದಲ್ಲಿ ಹಗಲು ಇರುಳು, ಮಳೆ– ಬಿಸಿಲು ಎನ್ನದೆ ಒಂದೇ ಸಮನೆ ಓಡಾಡುತ್ತಿವೆ.

‘ಕಾನೂನು ಬದಲಿಸದೆ ರಾಜ್ಯದ ಬಡ ರೈತರ ಹಿತರಕ್ಷಣೆ ಅಸಾಧ್ಯ’

ಬೆಂಗಳೂರು, ಜುಲೈ 8– ಖಾತೆ ಪತ್ರ ಸ್ವಾಧೀನವಿರುವ ಭೂ ಮಾಲೀಕನ ಪರವಾಗಿ ಪೊಲೀಸರು ವರ್ತಿಸುವ ಕಾನೂನನ್ನು ಬದಲಾಯಿಸದೆ, ರಾಜ್ಯದಲ್ಲಿ ಬಡ ರೈತರ ಹಿತರಕ್ಷಣೆ ಸರ್ಕಾರದಿಂದ ಸಾಧ್ಯವಿಲ್ಲ ಎಂದು ವಿಧಾನಸಭೆಯಲ್ಲಿ ಇಂದು ಹಲವರು ಸದಸ್ಯರು ಸರ್ಕಾರಕ್ಕೆ ಸ್ಪಷ್ಟಪಡಿಸಿದರು.

ಭೂ ಪರಿಮಿತಿ ಮತ್ತು ನಗರ ಪರಿಮಿತಿ ಕಾನೂನು ಜಾರಿಗೆ ಬರಲಿರುವ ಸನ್ನಿವೇಶದಲ್ಲಿ ಆಸ್ತಿ, ಜಮೀನು ಪರಭಾರೆ ಮಾಡುವುದನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಬೇಕು ಎಂದು ಕೆಲವರು ಒತ್ತಾಯಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.