ADVERTISEMENT

75 ವರ್ಷಗಳ ಹಿಂದೆ: ಆಹಾರ ಸಚಿವರ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 0:22 IST
Last Updated 12 ಡಿಸೆಂಬರ್ 2025, 0:22 IST
<div class="paragraphs"><p>75 ವರ್ಷಗಳ ಹಿಂದೆ ಈ ದಿನ</p></div>

75 ವರ್ಷಗಳ ಹಿಂದೆ ಈ ದಿನ

   

ಮುಂಬಯಿ, ಡಿ. 11– ಕೇಂದ್ರ ಆಹಾರ ಸಚಿವ ಕೆ.ಎಂ. ಮುನ್ಷಿಯವರ ಅಧ್ಯಕ್ಷತೆಯಲ್ಲಿ ಸೇರಿದ ಅಖಿಲ ಭಾರತ ಆಹಾರ ಮಂತ್ರಿಗಳ ಸಮ್ಮೇಳನದಲ್ಲಿ, ಗ್ರಾಮಾಂತರ ಪ್ರದೇಶಗಳಲ್ಲಿ ಪಡಿತರ ವ್ಯವಸ್ಥೆ ರದ್ದುಪಡಿಸುವ ಬಗ್ಗೆ ತೀವ್ರ ಭಿನ್ನಾಭಿಪ್ರಾಯಗಳು ಕಂಡುಬಂದವು. 

ಇಪ್ಪತ್ತೆರಡು ಪ್ರಾಂತ್ಯಗಳ ಹಾಗೂ ಚೀಪ್‌ ಕಮಿಷನರ್ ಪ್ರಾಂತ್ಯಗಳ ಪ್ರತಿನಿಧಿಗಳು,  ಇಡೀ ದೇಶದಲ್ಲಿ ಸಂಯುಕ್ತ ಆಹಾರ ನೀತಿಯಿರಬೇಕೆಂದು ಒಪ್ಪಿದರು.

ADVERTISEMENT

ಬೆಂಗಳೂರೊಳಗೆ ವಿಮಾನಾಘಾತ

ಬೆಂಗಳೂರು, ಡಿ. 11– ಈ ದಿನ ಬೆಳಿಗ್ಗೆ 8.15 ಗಂಟೆಗೆ ‘ಪ್ರೆಂಟಿಸ್‌’ ವಿಮಾನವೊಂದು ಸಿವಿಲ್‌ ಪ್ರದೇಶದ ಕಮಲಾಬಾಯಿ ಸ್ಕೂಲಿನ ಬಳಿ, ಪಕ್ಕದಲ್ಲಿ ಬರುತ್ತಿದ್ದ ವಿಮಾನಕ್ಕೆ ಆಕಾಶದಲ್ಲೆ ಡಿಕ್ಕಿಯಾಗಿ ನೆಲಕ್ಕೆ ಬಿದ್ದು ಭಸ್ಮವಾಯಿತು. ವೈಮಾನಿಕ ಸ್ಥಳದಲ್ಲೇ ಮೃತಪಟ್ಟ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.