
ಪ್ರಜಾವಾಣಿ ವಾರ್ತೆ
75 ವರ್ಷಗಳ ಹಿಂದೆ ಈ ದಿನ
ಬುಧವಾರ 21.2.1951
ಮುಂಜಾಗ್ರತಾ ಸ್ಥಾನಬದ್ಧತೆಯ ತಿದ್ದಿದ ಶಾಸನ
ನವದೆಹಲಿ, ಫೆ. 20– ಏಳು ದಿನಗಳ ಕಾಲ, ಇಪ್ಪತ್ತೆಂಟು ಗಂಟೆಗಳಷ್ಟು ಚರ್ಚೆ ನಡೆದ ಬಳಿಕ ಭಾರತ ಪಾರ್ಲಿಮೆಂಟ್ ಇಂದು ಮುಂಜಾಗ್ರತಾ ಸ್ಥಾನಬದ್ಧತೆ (ತಿದ್ದಪಡಿ) ಮಸೂದೆಗೆ ಅಂಗೀಕಾರವಿತ್ತಿತು.
ಪ್ರಸ್ತುತ ಕಾನೂನನ್ನು ಸಡಿಲಗೊಳಿಸಿ ಮುಂಜಾಗ್ರತಾ ಸ್ಥಾನಬದ್ಧತೆಗೆ ಸರ್ಕಾರಕ್ಕಿರುವ ಅಧಿಕಾರವನ್ನು ಒಂದು ವರ್ಷ ಮುಂದುವರಿಸುವ ಕ್ರಮದ ಬಗ್ಗೆ ಚರ್ಚಿಸಿ ತೀರ್ಮಾನಕ್ಕೆ ಬರಲು ಪಾರ್ಲಿಮೆಂಟ್ ಇಂದು ಮಧ್ಯಾಹ್ನ 2 ಗಂಟೆಯಿಂದ ಏಳೂ ಕಾಲ ಗಂಟೆಯವರೆಗೆ ಸೇರಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.