75 ವರ್ಷಗಳ ಹಿಂದೆ
ಆಹಾರ ಪದಾರ್ಥಗಳ ಬೆಲೆ ಏರಿಸಿರುವುದಕ್ಕೆ ಪ್ರತಿಭಟನೆ
ಬೆಂಗಳೂರು, ಆಗಸ್ಟ್ 8– ಸರ್ಕಾರ ಆಗಸ್ಟ್ 1ರಿಂದ ರೇಷನ್ ಪದಾರ್ಥಗಳ ಬೆಲೆಯನ್ನು ಹೆಚ್ಚಿಸಿ, ಅಕ್ಕಿ ಪಡಿತರ ಪ್ರಮಾಣದಲ್ಲಿ ಖೋತಾ ಮಾಡಿರುವುದನ್ನು ಪ್ರತಿಭಟಿಸಲು ನಗರದ ಸೋಷಲಿಸ್ಟ್ ಪಾರ್ಟಿಯ ಸದಸ್ಯರು, ಅಠಾರಾ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಸುಮಾರು 500ಕ್ಕೂ ಮೇಲ್ಪಟ್ಟು ಸೋಷಲಿಸ್ಟ್ ಕಾರ್ಯಕರ್ತರು ಹಾಗೂ ಸಾರ್ವಜನಿಕರು, ಫ್ಲಕಾರ್ಡ್‌ಗಳನ್ನು ಹಿಡಿದುಕೊಂಡು, ಘೋಷಣೆಗಳನ್ನು ಮಾಡುತ್ತಾ ಬಳೇಪೇಟೆಯಿಂದ ಹೊರಟು ಅಠಾರಾ ಕಚೇರಿ ಬಳಿಗೆ ಮೆರವಣಿಗೆಯಲ್ಲಿ ಬಂದರು. ಕಬ್ಬನ್ ಪಾರ್ಕ್‌ನಲ್ಲಿ ಮುಂದಕ್ಕೆ ಹೋಗದಂತೆ ಪೊಲೀಸರು ಪ್ರದರ್ಶನಕಾರರನ್ನು ತಡೆದು, ಪ್ರತಿನಿಧಿಗಳು ಕಚೇರಿಗೆ ಹೋಗಿ ಆಹಾರ ಸಚಿವರನ್ನು ಭೇಟಿ ಮಾಡಲು ಅವಕಾಶವಿತ್ತರು.
ಬಿಹಾರ ಕ್ಷಾಮ ಪೀಡಿತ ಸ್ಥಳದ ಪರಿಹಾರಕ್ಕೆ ಅಷ್ಟಾಂಶ ಯೋಜನೆ
ಪಟ್ನಾ, ಆಗಸ್ಟ್ 8– ಸೋಷಲಿಸ್ಟ್ ನಾಯಕ ಜೈಪ್ರಕಾಶ ನಾರಾಯಣರು ಬಿಹಾರದಲ್ಲಿ ಕ್ಷಾಮಪೀಡಿತ ಪ್ರದೇಶಗಳಲ್ಲಿನ ಆಹಾರ ಸಮಸ್ಯೆಯ ಪರಿಹಾರಕ್ಕಾಗಿ ಎಂಟು ಅಂಶಗಳ ಕಾರ್ಯಕ್ರಮವನ್ನು ಸೂಚಿಸಿ ಹೇಳಿಕೆಯೊಂದನ್ನಿತ್ತಿದ್ದಾರೆ.
ಪೂರ್ಣಿಯಾ ಜಿಲ್ಲೆಗಳಲ್ಲಿ ನಿರಾಹಾರ ದಿಂದ ಆರು ಮಂದಿ ಮೃತರಾದರೆಂದು ಅಧಿಕಾರಿಗಳೇ ಒಪ್ಪಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.