ADVERTISEMENT

25 ವರ್ಷಗಳ ಹಿಂದೆ: ನರಸಿಂಹ ರಾವ್‌, ಬೂಟಾಸಿಂಗ್‌ಗೆ 3 ವರ್ಷ ಕಠಿಣ ಜೈಲುಶಿಕ್ಷೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 22:58 IST
Last Updated 12 ಅಕ್ಟೋಬರ್ 2025, 22:58 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ನವದೆಹಲಿ, ಅ. 12– ತಮ್ಮ ಸರ್ಕಾರವನ್ನು ಅವಿಶ್ವಾಸ ಗೊತ್ತುವಳಿಯಿಂದ ರಕ್ಷಿಸಲು ಜಾರ್ಖಂಡ್‌ ಮುಕ್ತಿ ಮೋರ್ಚಾದ ಲೋಕಸಭಾ ಸದಸ್ಯರಿಗೆ ಲಂಚ ನೀಡಿದ ಹಗರಣದಲ್ಲಿ ಅಪರಾಧಿಗಳೆಂದು ಸಾಬೀತಾಗಿರುವ ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್‌ ಮತ್ತು ಮಾಜಿ ಸಚಿವ ಬೂಟಾ ಸಿಂಗ್‌ ಅವರಿಗೆ, ವಿಶೇಷ ನ್ಯಾಯಾಲಯ ಇಂದು ತಲಾ ಮೂರು ವರ್ಷಗಳ ಕಠಿಣ ಜೈಲು ವಾಸ ಹಾಗೂ ಎರಡು ಲಕ್ಷ ರೂಪಾಯಿ ದಂಡ ವಿಧಿಸಿತು.

ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡುವ ಸಲುವಾಗಿ ನವೆಂಬರ್‌ 8ರವರೆಗೆ ಇಬ್ಬರಿಗೂ ತಲಾ ಎರಡು ಲಕ್ಷ ರೂಪಾಯಿ ವೈಯಕ್ತಿಕ ಬಾಂಡಿನ ಭದ್ರತೆಯ ಮೇಲೆ ಜಾಮೀನು ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT