ADVERTISEMENT

25 ವರ್ಷಗಳ ಹಿಂದೆ: ಆಮೂರ, ನಾಯಕ್‌ ಸೇರಿದಂತೆ 55 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ?

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 23:30 IST
Last Updated 29 ಅಕ್ಟೋಬರ್ 2025, 23:30 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಬೆಂಗಳೂರು, ಅ. 29– ಸಾಹಿತ್ಯಕ್ಕೆ ಜಿ.ಎಸ್. ಆಮೂರ ಮತ್ತು ಜಿ.ಎಚ್. ನಾಯಕ್, ಸಂಗೀತಕ್ಕೆ ಕೃಷ್ಣ ಹಾನಗಲ್, ರಂಗಭೂಮಿಗೆ ಉಮಾಶ್ರೀ ಮತ್ತು ಕೃಷಿಗೆ ಎಸ್‌.ಸಿ. ಪಾಟೀಲ್‌ ಸೇರಿದಂತೆ ಸುಮಾರು 55 ಮಂದಿ ಗಣ್ಯರಿಗೆ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿಗಳನ್ನು ನಾಳೆ ಪ್ರಕಟಿಸುವ ಸಂಭವವಿದೆ.

ಪ್ರಶಸ್ತಿಗಾಗಿ ಸುಮಾರು 4,000 ಅರ್ಜಿಗಳು ಬಂದಿದ್ದ ಹಿನ್ನೆಲೆಯಲ್ಲಿ ಅವುಗಳನ್ನು ಪರಿಶೀಲಿಸಿದ ಸಮಿತಿಯು 55ಕ್ಕೆ ಸೀಮಿತಗೊಳಿಸಿ, ಸಿದ್ಧಗೊಳಿಸಿದ್ದ ಪಟ್ಟಿಗೆ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರು, ಇಂದು ರಾತ್ರಿ ಒಪ್ಪಿಗೆ ನೀಡಿದ್ದು ನಾಳೆ, ಪಟ್ಟಿಯು ಪ್ರಕಟವಾಗಲಿದೆ.

ಸೋನಿಯಾ ಗಾಂಧಿಗೆ ಜಿತೇಂದ್ರ ಪ್ರಸಾದ ಸವಾಲು

ADVERTISEMENT

ನವದೆಹಲಿ, ಅ. 29– ಉತ್ತರ ಪ್ರದೇಶದ ಕಾಂಗ್ರೆಸ್‌ ನಾಯಕ ಜಿತೇಂದ್ರ ಪ್ರಸಾದ ಇಂದು ನಾಮಪತ್ರ ಸಲ್ಲಿಸುವ ಮೂಲಕ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಇಂದಿರಾಗಾಂಧಿ–ನೆಹರೂ ಕುಟುಂಬದ ಸದಸ್ಯೆಯನ್ನು ಎದುರಿಸುವ ಸವಾಲು ಸ್ವೀಕರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.