ಹಕ್ಕುಚ್ಯುತಿ ಯತ್ನ, ಬಗೆಹರಿಯದ ಬಿಕ್ಕಟ್ಟು
ಬೆಂಗಳೂರು, ಆ.21– ಸಭಾಧ್ಯಕ್ಷರು ನೀಡಿದ ತೀರ್ಪನ್ನು ವಿರೋಧ ಪಕ್ಷದ ನಾಯಕರು ಸದನದ ಹೊರಗೆ ಪ್ರಶ್ನಿಸಿದ್ದಾರೆಂಬ ಹಿನ್ನೆಲೆಯಲ್ಲಿ ಉದ್ಭವವಾಗಿದ್ದ ಸಮಸ್ಯೆ ಬಗೆಹರಿಸಲು ಇಂದು ಬೆಳಗಿನಿಂದ ಸಂಜೆವರೆಗೆ ನಡೆದ ತೆರೆಮರೆಯ ಸಂಧಾನದ ಪ್ರಯತ್ನ ವಿಫಲವಾಯಿತು. ಈ ವಿಚಾರದಲ್ಲಿ ಹಕ್ಕುಚ್ಯುತಿ ಮಂಡನೆಗೆ ಅನುಮತಿ ಕೋರಿ ಪೂರ್ವಭಾವಿ ಪ್ರಸ್ತಾಪ ಮಾಡಲು ವಿಧಾನಸಭೆಯಲ್ಲಿ ಅನುಮತಿ ದೊರಕಿದ್ದು ಪ್ರಕರಣ ಕುತೂಹಲ ಕೆರಳಿಸಿದೆ.
ಸಚಿವ ರೋಷನ್ ಬೇಗ್ ವಿರುದ್ಧ ಮಾಡಲಾದ ಆರೋಪಗಳ ಸಂಬಂಧದಲ್ಲಿ ಸಭಾಧ್ಯಕ್ಷ ರಮೇಶ್ ಕುಮಾರ್ ಅವರ ತೀರ್ಪನ್ನು ಶಂಕಿಸುವ ಧಾಟಿಯಲ್ಲಿ ವಿರೋಧಿ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಆಡಿರುವ ಮಾತುಗಳಿಂದ ಸೃಷ್ಟಿಯಾಗಿರುವ ವಿವಾದಕ್ಕೆ ಸದನದ ಆರಂಭಕ್ಕೂ ಮುಂಚೆ ನಡೆದ ಸರ್ವಪಕ್ಷಗಳ ನಾಯಕರ ಸಭೆಯಲ್ಲಿ ತೆರೆಬೀಳಲಿಲ್ಲ. ಬಿಕ್ಕಟ್ಟು ಬಗೆಹರಿಯದೆ ಇಂದು ಸಂಜೆಯವರೆಗೂ ಕಲಾಪಗಳೆಲ್ಲ ಸ್ಥಗಿತಗೊಂಡು ರಾಜ್ಯದ ಶಾಸಕಾಂಗ ಇತಿಹಾಸದಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.