ಗ್ರಾಮೀಣ ಅಭ್ಯರ್ಥಿಗಳಿಗೆ ಶೇ 5ರಷ್ಟು ಹುದ್ದೆ ಮೀಸಲು
ಬೆಂಗಳೂರು, ಸೆಪ್ಟೆಂಬರ್ 15– ಗ್ರಾಮೀಣ ವಿದ್ಯಾರ್ಥಿಗಳಿಗೆ ಕೃಪಾಂಕದ ಬದಲಾಗಿ ನೇಮಕಾತಿಯಲ್ಲಿ
ಶೇ 5ರಷ್ಟು ಹುದ್ದೆಗಳ ಪ್ರತ್ಯೇಕ ಮೀಸಲಾತಿ ನೀಡುವಂತೆ ನ್ಯಾಯಮೂರ್ತಿ ಆರ್. ರಾಮಕೃಷ್ಣ ನೇತೃತ್ವದ ಆಯೋಗ ಶಿಫಾರಸು ಮಾಡಿದೆ.
ಕೃಪಾಂಕ ಪದ್ಧತಿಯನ್ನು ಹೈಕೋರ್ಟ್ ರದ್ದುಪಡಿಸಿದ್ದನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದ ಹಿನ್ನೆಲೆಯಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸರ್ಕಾರ ಆಯೋಗ ನೇಮಿಸಿತ್ತು.
ಅಮೆರಿಕ ಜತೆ 5 ಒಪ್ಪಂದಕ್ಕೆ ಸಹಿ
ವಾಷಿಂಗ್‌ಟನ್, ಸೆಪ್ಟೆಂಬರ್ 15 (ಪಿಟಿಐ)– ದ್ವಿಪಕ್ಷೀಯ ಆರ್ಥಿಕ ಬಾಂಧವ್ಯ ಹೆಚ್ಚಳಕ್ಕಾಗಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಭೇಟಿ ಸಂದರ್ಭದಲ್ಲಿ 6 ಶತಕೋಟಿ ಡಾಲರ್ ಮೌಲ್ಯದ 5 ವಾಣಿಜ್ಯ ಒಪ್ಪಂದಗಳಿಗೆ ಭಾರತ–ಅಮೆರಿಕ ಸಹಿ ಹಾಕಿವೆ.
ಹಣಕಾಸು ಸಚಿವ ಯಶವಂತ ಸಿನ್ಹಾ ಹಾಗೂ ಅಮೆರಿಕ ವಾಣಿಜ್ಯ ಕಾರ್ಯದರ್ಶಿ ನಾರ್ಮನ್ ವೈ ಮಿನೆಟಾ ಹಾಜರಿಯಲ್ಲಿ ಸಹಿ ಹಾಕಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.