ADVERTISEMENT

75 ವರ್ಷಗಳ ಹಿಂದೆ: ಕ್ಯಾಮರೋನ್ ಬಳಿ ವಿಮಾನಾಪಘಾತ

1951ರ ಫೆಬ್ರುವರಿ 6, ಮಂಗಳವಾರ

ಪ್ರಜಾವಾಣಿ ವಿಶೇಷ
Published 5 ಫೆಬ್ರುವರಿ 2026, 21:39 IST
Last Updated 5 ಫೆಬ್ರುವರಿ 2026, 21:39 IST
   

ಪ್ಯಾರಿಸ್, ಫೆ. 5: ಫ್ರೆಂಚ್ ಆಫ್ರಿಕದ ಬ್ರಾಜಾವಿಲೇಯಿಂದ ಪ್ಯಾರಿಸ್‌ಗೆ ಹೊರಟು ನಿನ್ನೆಯಿಂದಲೂ ಪತ್ತೆಯಿಲ್ಲದ ವಿಮಾನವೊಂದನ್ನು ಹುಡುಕಲು ಹೊರಟ ಬೇಹುಗಾರ ವಿಮಾನವೊಂದು, ಸದರಿ ವಿಮಾನವು ಕ್ಯಾಮರೋನ್ ಬಳಿ ಉರುಳಿ ಬಿದ್ದಿರುವುದನ್ನು ಇಂದು ಪತ್ತೆ ಹಚ್ಚಿದೆ.

ಉರುಳಿ ಬಿದ್ದ ಈ ದುರದೃಷ್ಟಕರ ವಿಮಾನದಲ್ಲಿ 23 ಮಂದಿ ಪ್ರಯಾಣಿಕರೂ ಆರು ಮಂದಿ ಸಂಚಾಲಕರೂ ಇದ್ದರು.

ಈ ಪೈಕಿ ಯಾರೂ ಬದುಕಿರುವ ಸಂಭವವಿಲ್ಲ. ಮಿಲಿಟರಿ ಬೇಹುಗಾರ ಪಡೆಯವರು ವಿಮಾನ ಬಿದ್ದ ಸ್ಥಳಕ್ಕೆ ಹೋಗಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.