ADVERTISEMENT

25 ವರ್ಷಗಳ ಹಿಂದೆ: ಕೃಷಿ ವಿದ್ಯುತ್‌ ದರ ಹೆಚ್ಚಳಕ್ಕೆ ಸಲಹೆ

2001ರ ಮಾರ್ಚ್‌ 4, ಭಾನುವಾರ

ಪ್ರಜಾವಾಣಿ ವಿಶೇಷ
Published 3 ಮಾರ್ಚ್ 2026, 23:40 IST
Last Updated 3 ಮಾರ್ಚ್ 2026, 23:40 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಕೃಷಿ ವಿದ್ಯುತ್‌ ದರ ಹೆಚ್ಚಳಕ್ಕೆ ಸಲಹೆ

ನವದೆಹಲಿ, ಮಾರ್ಚ್‌ 3 (ಪಿಟಿಐ)– ರಾಜ್ಯ ವಿದ್ಯುತ್‌ ಮಂಡಳಿಗಳನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಕೃಷಿಗೆ ಬಳಸುವ ವಿದ್ಯುತ್‌ ದರವನ್ನು ಸರಾಸರಿ ವೆಚ್ಚದ ಶೇ 50ಕ್ಕೆ ಏರಿಸಬೇಕು ಎಂದು ಪ್ರಧಾನಿ ವಾಜಪೇಯಿ ಅವರು, ಇಂದು ರಾಜ್ಯಗಳಿಗೆ ಕರೆ ನೀಡಿದ್ದಾರೆ.

ಇಂದು ಇಲ್ಲಿ ನಡೆದ ವಿದ್ಯುತ್‌ ವಲಯದ ಸುಧಾರಣೆಗಳ ಕುರಿತ ಮುಖ್ಯಮಂತ್ರಿಗಳ ಸಮಾವೇಶದಲ್ಲಿ ಮಾತನಾಡಿದ ವಾಜಪೇಯಿ, ಒಂದು ಯೂನಿಟ್‌ ವಿದ್ಯುತ್‌ಗೆ 50 ಪೈಸೆ ದರ ಏರಿಸಬೇಕು ಎಂದು 1996ರ ಮುಖ್ಯಮಂತ್ರಿಗಳ ಸಮಾವೇಶದಲ್ಲಿ ಕೈಗೊಂಡಿದ್ದ ನಿರ್ಣಯವು ಸಂಪೂರ್ಣವಾಗಿ ಜಾರಿಗೊಳ್ಳದಿರುವ ಬಗ್ಗೆ ವಿಷಾದಿಸಿದರು.

ADVERTISEMENT

ಕೇಂದ್ರ ಮತ್ತು ರಾಜ್ಯಗಳ ನಡುವೆ ಉತ್ತಮ ಸಹಕಾರವಿದ್ದರೆ ಮಾತ್ರ ವಿದ್ಯುತ್ ಕ್ಷೇತ್ರದ ಸುಧಾರಣೆ ಸಾಧ್ಯ ಎಂದರು.

_____________

ಸಂಪನ್ಮೂಲ ಅಭಿವೃದ್ಧಿಗೆ ಖಾಸಗಿ ನೆರವು: ಲಕ್ಕಪ್ಪಗೌಡ

ಬೆಂಗಳೂರು, ಮಾರ್ಚ್ 3– ‘ಕೇವಲ ಸರ್ಕಾರದ ಅನುದಾನದ ಮೇಲೆಯೇ ಅವಲಂಬಿತವಾಗದೆ ಖಾಸಗಿಯವರ ನೆರವನ್ನೂ ಪಡೆದುಕೊಂಡು ವಿಶ್ವ ವಿದ್ಯಾಲಯದ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸುವುದು’ ಹಂಪಿ ಕನ್ನಡ ವಿಶ್ವವಿದ್ಯಾಲಯದ ನೂತನ ಕುಲಪತಿ ಯಾಗಿ ನೇಮಕಗೊಂಡಿರುವ ಡಾ. ಎಚ್‌.ಜೆ. ಲಕ್ಕಪ್ಪಗೌಡ ಅವರ ಆಶಯ.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಮೂರನೇ ಕುಲಪತಿಯಾಗಿ ಮಾರ್ಚ್‌ 7ರಂದು ಅಧಿಕಾರ ವಹಿಸಿಕೊಳ್ಳಲಿರುವ ಅವರು, ಇಂದು ‘ಪ್ರಜಾವಾಣಿ’ಯ ಜತೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

‘ಸರ್ಕಾರದ ಅನುದಾನದ ಜೊತೆಗೆ ವಿ.ವಿ ಸಂಪನ್ಮೂಲ ಕ್ರೋಢಿಕರಿಸುವ ಅಗತ್ಯ ಹೆಚ್ಚಿದೆ ಇದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.