
25 ವರ್ಷಗಳ ಹಿಂದೆ ಈ ದಿನ
ವೀರಪ್ಪನ್ ಭಂಟ ಸೇತುಕುಳಿ ಗೋವಿಂದನ್ ಬಂಧನ
ಕೊಯಮತ್ತೂರು, ಫೆ. 16 (ಯುಎನ್‌ಐ)– ತಮಿಳುನಾಡು ವಿಶೇಷ ಕಾರ್ಯಾಚರಣೆ ಪಡೆ ಇಂದು ವೀರಪ್ಪನ್‌ನ ನಿಕಟವರ್ತಿಯಾಗಿದ್ದ ಸೇತುಕುಳಿ ಗೋವಿಂದನ್‌ನನ್ನು ಸಿರುವಾಣಿ ಅರಣ್ಯದಲ್ಲಿ ಬಂಧಿಸುವ ಮೂಲಕ ಮಹತ್ವದ ಸಾಧನೆ ಮಾಡಿದೆ.
ವೀರಪ್ಪನ್‌ನ ಬಲಗೈ ಭಂಟನೆಂದೇ ಗುರುತಿಸಿಕೊಂಡಿದ್ದ ಸೇತುಕುಳಿಯನ್ನು ಹಿಡಿಯಲು ಬಹುಮಾನ ಕೂಡ ಘೋಷಿಸಲಾಗಿತ್ತು. ಸಿರುವಾಣಿ ಅರಣ್ಯ
ದಲ್ಲಿ ಪೊಲೀಸರಿಂದ ಸುತ್ತುವರಿಯ
ಲ್ಪಟ್ಟ ಸೇತುಕುಳಿ ಶರಣಾದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಗೋವಿಂದನ್ ಬಂಧನದಿಂದ ಎಸ್‌ಟಿಎಫ್ ಪ್ರಮುಖ ಜಯ
ವೊಂದನ್ನು ಸಾಧಿಸಿದಂತಾಗಿದೆ.
ಗಡಿ ಚಳವಳಿ ಪುನರ್ ರೂಪಿಸಲು ಶಿವಸೇನೆ ಯೋಜನೆ
ಬೆಳಗಾವಿ, ಫೆ. 16– ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದ ಇತ್ಯರ್ಥ
ಪಡಿಸುವಂತೆ ಕೇಂದ್ರದ ಮೇಲೆ ಒತ್ತಡ ತರಲು ಶಿವಸೇನೆಯು ಚಳವಳಿಯನ್ನು ಪುನರ್ ರೂಪಿಸಲಿದೆ ಎಂದು ಕೇಂದ್ರದ ಭಾರೀ ಕೈಗಾರಿಕಾ ಖಾತೆ ಸಚಿವ ಹಾಗೂ ಶಿವಸೇನೆ ಪಕ್ಷದ ಮುಖಂಡ ಮನೋಹರ ಜೋಶಿ ಸುದ್ದಿಗಾರರಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.