ಬೆಂಗಳೂರು, ಜುಲೈ 31– ತಮ್ಮ ಸ್ವಗ್ರಾಮವಾದ ತಮಿಳುನಾಡು ಗಡಿ ಭಾಗದ ಗಾಜನೂರಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಕನ್ನಡದ ಮೇರುನಟ ಡಾ. ರಾಜ್‌ಕುಮಾರ್ ಹಾಗೂ ಅವರ ಅಳಿಯ ಸೇರಿದಂತೆ ನಾಲ್ವರನ್ನು ಕಾಡುಗಳ್ಳ ವೀರಪ್ಪನ್ ಭಾನುವಾರ ರಾತ್ರಿ ಅಪಹರಿಸಿದ್ದಾನೆ.
ಅಪಹರಣದ ಸುದ್ದಿ ರಾಜ್ಯಾದ್ಯಂತ ಕಾಡ್ಗಿಚ್ಚಿನಂತೆ ಹರಡುತ್ತಿದ್ದಂತೆಯೇ ವಿವಿಧೆಡೆ ಬಂದ್ ಹಾಗೂ ಪ್ರತಿಭಟನೆ ಗಳು ನಡೆದವು.
ನಗರದಲ್ಲಿ ಹಲವೆಡೆ ಅಗ್ನಿಸ್ಪರ್ಶ, ಕಲ್ಲುತೂರಾಟ, ರಸ್ತೆತಡೆಗಳಿಂದಾಗಿ ಜನಜೀವನ ಅಸ್ತವ್ಯಸ್ತ ಆಗಿತ್ತು.
ಡಾ. ರಾಜ್‌ಕುಮಾರ್ ಮತ್ತು ಅವರ ಪತ್ನಿ ಪಾರ್ವತಮ್ಮ ರಾಜ್‌ಕುಮಾರ್ ಅವರು ಕುಟುಂಬದ ಸದಸ್ಯರ ಜೊತೆಯಲ್ಲಿ ಶುಕ್ರವಾರದಿಂದ ರಾಜ್ಯದ ಗಡಿಗೆ ಹೊಂದಿಕೊಂಡಿರುವ ತಮಿಳುನಾಡಿನ ತಾಳವಾಡಿ ಬಳಿಯ ಗಾಜನೂರು ಗ್ರಾಮದಲ್ಲಿ ಇರುವ ತಮ್ಮ ತೋಟದ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು.
ಶ್ರೀನಗರ, ಜುಲೈ 31 (ಪಿಟಿಐ)– ಕಳೆದ ವಾರ ಹಿಜಬುಲ್ ಮುಜಾಹಿದ್ದೀನ್ ಕದನ ವಿರಾಮ ಘೋಷಿಸಿದ ಮೇಲೆ ಇದೇ ಮೊದಲ ಬಾರಿಗೆ ಶಸ್ತ್ರಸಜ್ಜಿತ ಉಗ್ರರು, ಕಳೆದ ರಾತ್ರಿ ಉತ್ತರ ಕಾಶ್ಮೀರದ ಸೈನಿಕ ಶಿಬಿರದ ಮೇಲೆ ಪ್ರಮುಖ ದಾಳಿ ನಡೆಸಿ 7 ಸೈನಿಕರನ್ನು ಕೊಂದು ಹಾಕಿದ್ದಾರೆ. ಇತರೆ 7 ಮಂದಿ ಗಾಯಗೊಂಡಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.