
ಟೆಹರಾನ್, ಡಿ. 24– ಭಾರತದ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಫಿಡೆ ವಿಶ್ವ ಚೆಸ್ ಚಾಂಪಿಯನ್‌ಷಿಪ್‌ನ ಅಂತಿಮ ಪಂದ್ಯದಲ್ಲಿ ಇಂದು ಸ್ಪೇನ್‌ನ ಅಲೆಕ್ಸಿ ಶಿರೋವ್ ಅವರನ್ನು ಸೋಲಿಸಿ ವಿಶ್ವ ಚಾಂಪಿಯನ್ ಪಟ್ಟಕ್ಕೇರಿದರು.
ಇದುವರೆಗೆ ರಷ್ಯಾದ ಪಾರುಪತ್ಯಕ್ಕೆ ಒಳಗಾಗಿದ್ದ ವಿಶ್ವ ಚೆಸ್ ಚಾಂಪಿಯನ್‌ಷಿಪ್ ಪಟ್ಟಕ್ಕೇರುತ್ತಿರುವ ಏಷ್ಯಾದ ಮೊದಲ ಆಟಗಾರ ಎನ್ನುವ ಖ್ಯಾತಿಗೆ ಆನಂದ್ ಭಾಜನರಾದರು. ಚಾಂಪಿಯನ್‌ಷಿಪ್‌ನ ಅಂತಿಮ ಸುತ್ತಿನ ನಾಲ್ಕನೇ ಪಂದ್ಯದಲ್ಲಿ ಸೋತು ಸೊರಗಿದ್ದ ಶಿರೋವ್ ಅವರನ್ನು ಸೋಲಿಸಿ, 3.5–0.5ರಲ್ಲಿ ಮುನ್ನಡೆ ಗಳಿಸಿದ ಆನಂದ್, ಇನ್ನೂ ಎರಡು ಪಂದ್ಯಗಳು ಬಾಕಿಯಿರುವಂತೆಯೇ ಚಾಂಪಿಯನ್ ಆಗಿ ಮೆರೆದರು.
ಪಾಕ್ ಜತೆ ಸಂಧಾನ: ಅಡ್ವಾಣಿ ಇಂಗಿತ
ನವದೆಹಲಿ, ಡಿ. 24– ಕಾಶ್ಮೀರ ಸಮಸ್ಯೆಗೆ ಸಂಬಂಧಿಸಿದಂತೆ ಹಿಜಬುಲ್ ಮುಜಾಹಿದೀನ್ ಸೇರಿದಂತೆ ಯಾವುದೇ ಉಗ್ರಗಾಮಿ ಸಂಘಟನೆ ಜತೆಗೆ ಕೇಂದ್ರ ಸರ್ಕಾರವು ಸಂಧಾನ ನಡೆಸುವ ಸಾಧ್ಯತೆ ಇದೆ ಎಂದು ಕೇಂದ್ರ ಗೃಹ ಸಚಿವ ಎಲ್.ಕೆ. ಅಡ್ವಾಣಿ ಅಭಿಪ್ರಾಯಪಟ್ಟಿದ್ದಾರೆ.
ಕಾಶ್ಮೀರ ಕಣಿವೆಯಲ್ಲಿ ಭಾರತವು ಕದನ ವಿರಾಮ ವಿಸ್ತರಿಸಿದ ನಂತರದ ಅವಧಿಯಲ್ಲಿ ಪಾಕಿಸ್ತಾನದ ವರ್ತನೆ ಅಭ್ಯಸಿಸಿದ ನಂತರ, ಆ ದೇಶದ ಜತೆಗೂ ಸಂಧಾನ ನಡೆಸುವ ಸಾಧ್ಯತೆಗಳೂ ಇವೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.