
ಪ್ರಜಾವಾಣಿ ವಾರ್ತೆ
ನವದೆಹಲಿ, ಜ24– ಉತ್ತರ ಪ್ರದೇಶದ ಜಮೀನ್ದಾರಿ ನಿರ್ಮೂಲನ ಮಸೂದೆಗೆ ರಾಷ್ಟ್ರಾಧ್ಯಕ್ಷ ರಾಜೇಂದ್ರ ಪ್ರಸಾದರು ಅಂಗೀಕಾರವಿತ್ತಿದ್ದಾರೆ.
ಒಂದೂವರೆ ಶಮಾನಗಳಿಂದಲೂ ನಡೆದುಕೊಂಡು ಬಂದಿರುವ ಜಮೀನ್ದಾರಿ ಪದ್ಧತಿಯನ್ನು ತೊಡೆದುಹಾಕಬೇಕೆಂಬ ಮಸೂದೆಯು ಶಾಸನ ಸಭೆಯಲ್ಲಿ ಅಂಗೀಕಾರವಾಯಿತು.
ಮೇಲ್ಮನೆಯು ಜನವರಿ 16ರಂದು ಮಸೂದೆಯನ್ನು ಒಪ್ಪಿ ಭಾರತ ರಾಜ್ಯಾಂಗದ 1ನೇ ವಿಧಿಯ ಪ್ರಕಾರ ರಾಷ್ಟ್ರಾಧ್ಯಕ್ಷರ ಅನುಮತಿಗೆ ಕಾದಿಡಲಾಗಿತ್ತು.
ಜನವರಿ 26ರಂದು ಲೋಕರಾಜ್ಯ ದಿನಾಚರಣೆಯ ಸಂದರ್ಭದಲ್ಲಿ ಶಾಸನವನ್ನು ಉದ್ಘಾಟಿಸಬಹುದೆಂದು ಮುಖ್ಯಮಂತ್ರಿ ಶ್ರೀ ಗೋವಿಂದ ವಲ್ಲಭ ಪಂತರು ಶಾಸನ ಸಭೆಯಲ್ಲಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.