ADVERTISEMENT

S. L. Bhyrappa: ಭೈರಪ್ಪ ಅವರ ಪ್ರಮುಖ ಕೃತಿಗಳು, ಸಂದ ಪ್ರಶಸ್ತಿಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಸೆಪ್ಟೆಂಬರ್ 2025, 11:05 IST
Last Updated 24 ಸೆಪ್ಟೆಂಬರ್ 2025, 11:05 IST
   

ಕಾದಂಬರಿಕಾರ ಪ್ರೊ.ಎಸ್‌.ಎಲ್‌.ಭೈರಪ್ಪ (91) ಅವರು ಬೆಂಗಳೂರಿನ ರಾಜರಾಜೇಶ್ವರಿನಗರದ  ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಬುಧವಾರ ಮಧ್ಯಾಹ್ನ 2.38ಕ್ಕೆ ಹೃದಾಯಾಘಾತದಿಂದ ನಿಧನರಾಗಿದ್ದಾರೆ. ಅವರು ರಚಿಸಿರುವ ಪ್ರಮುಖ ಕೃತಿಗಳ ಪಟ್ಟಿ ಇಲ್ಲಿದೆ..

ಪ್ರಮುಖ ಕಾದಂಬರಿಗಳು:

ವಿದ್ಯಾರ್ಥಿಯಾಗಿದ್ದಾಗಲೇ ‘ಭೀಮಕಾಯ’, ‘ಬೆಳಕು ಮೂಡಿತು’ ಕಾದಂಬರಿಗಳನ್ನು ಬರೆದಿದ್ದ ಅವರ ಮೊದಲ ಕಾದಂಬರಿ ‘ಧರ್ಮಶ್ರೀ’ 1961ರಲ್ಲಿ ‍ಪ್ರಕಟಗೊಂಡಿತ್ತು.

ಎಸ್‌.ಎಲ್‌. ಭೈರಪ್ಪ ಅವರ ಪ್ರಮುಖ ಕೃತಿಗಳು
1ಗತಜನ್ಮ ಮತ್ತೆರೆಡು ಕಥೆಗಳು1955
2ಭೀಮಕಾಯ 1958
3ಬೆಳಕು ಮೂಡಿತು 1959
4ಧರ್ಮಶ್ರೀ 1961
5ದೂರ ಸರಿದರು 1962
6ಮತದಾನ1965
7ವಂಶವೃಕ್ಷ1965
8ಜಲಪಾತ1967
9ನಾಯಿ ನೆರಳು 1968
10ತಬ್ಬಲಿಯು ನೀನಾದೆ ಮಗನೆ 1968
11ಗೃಹಭಂಗ1970
12ನಿರಾಕರಣ1971
13‌‌ಗ್ರಹಣ1972
14ದಾಟು 1973
15ಅನ್ವೇಷಣೆ 1976
16ಪರ್ವ 1979
17ನೆಲೆ1983
18ಸಾಕ್ಷಿ1986
19ಅಂಚು1990
20ತಂತು1993
21ಸಾರ್ಥ1998
22ಮಂದ್ರ2001
23ಆವರಣ2007
24ಕವಲು2010
25ಯಾನ2014
26ಉತ್ತರಕಾಂಡ 2017
ಆತ್ಮ ಚರಿತ್ರೆ–ಭಿತ್ತಿ

ವಿಮರ್ಶೆ

  • ಸತ್ಯ ಮತ್ತು ಸೌಂದರ್ಯ (1966) - ಪಿ.ಎಚ್.ಡಿ ಪ್ರಬಂಧ

    ADVERTISEMENT
  • ಸಾಹಿತ್ಯ ಮತ್ತು ಪ್ರತೀಕ (1967)

  • ಕಥೆ ಮತ್ತು ಕಥಾವಸ್ತು (1969)

  • ನಾನೇಕೆ ಬರೆಯುತ್ತೇನೆ? (1980)

  • ಸಂದರ್ಭ: ಸಂವಾದ (2011)

  • ಸಾಕ್ಷಿ ಪರ್ವ (2019)

ಸಣ್ಣಕಥೆ – ಅವ್ವ

ಚಲನಚಿತ್ರವಾಗಿರುವ ಕಾದಂಬರಿಗಳು

  • ವಂಶವೃಕ್ಷ - (1972)

  • ತಬ್ಬಲಿಯು ನೀನಾದೆ ಮಗನೆ - (1977)

  • ಮತದಾನ - (2001)

  • ನಾಯಿ ನೆರಳು - (2006)

ಧಾರಾವಾಹಿಯಾಗಿರುವ ಕಾದಂಬರಿಗಳು
  • ಗೃಹಭಂಗ

  • ದಾಟು (ಹಿಂದಿ)

ರಾಷ್ಟ್ರೀಯ ಪ್ರಶಸ್ತಿಗಳು

ಪದ್ಮಭೂಷಣ ಪ್ರಶಸ್ತಿ (2023)

ಬೇಂದ್ರೆ ರಾಷ್ಟ್ರೀಯ ಪ್ರಶಸ್ತಿ

ಪದ್ಮಶ್ರೀ ಪ್ರಶಸ್ತಿ (2016)

ಸಾಹಿತ್ಯ ಅಕಾಡೆಮಿ ಫೆಲೋಶಿಪ್ (2015)

ರಾಷ್ಟ್ರೀಯ ಸಂಶೋಧನಾ ಪ್ರಾಧ್ಯಾಪಕರು (National Research Professor)

ಸರಸ್ವತಿ ಸಮ್ಮಾನ್ (2011).

ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1975)

ರಾಜ್ಯ ಪ್ರಶಸ್ತಿಗಳು

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ (2020)

ನೃಪತುಂಗ ಪ್ರಶಸ್ತಿ (2017)

ಶ್ರೀ ಕೃಷ್ಣದೇವರಾಯ ಪ್ರಶಸ್ತಿ (2017)

ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ (2015)

ಬೆಟಗೇರಿ ಕೃಷ್ಣಶರ್ಮ ಪ್ರಶಸ್ತಿ (2014)

ವಾಗ್ವಿಲಾಸಿನಿ ಪುರಸ್ಕಾರ (2012)

ನಾಡೋಜ ಪ್ರಶಸ್ತಿ (2011)

ಎನ್‌ಟಿಆರ್‌ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ (2007

ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ (2007)

ಪಂಪ ಪ್ರಶಸ್ತಿ (2005)

ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1966)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.