ADVERTISEMENT

ಕೆಂಗಲ್‌ರನ್ನು ಮರೆತರೇ?

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2017, 19:30 IST
Last Updated 26 ಅಕ್ಟೋಬರ್ 2017, 19:30 IST
ಕೆಂಗಲ್‌ರನ್ನು ಮರೆತರೇ?
ಕೆಂಗಲ್‌ರನ್ನು ಮರೆತರೇ?   

ಕರ್ನಾಟಕದ ಹೆಮ್ಮೆ ಎನಿಸಿರುವ ವಿಧಾನಸೌಧದ ವಜ್ರಮಹೋತ್ಸವವನ್ನು ಆಚರಿಸಿರುವುದು ಸಂತಸದ ವಿಷಯ. ಆದರೆ ಸರ್ಕಾರ, ವಿಧಾನಸೌಧ ನಿರ್ಮಾತೃ, ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರ ಸಮಾಧಿಗೆ ಒಂದು ಹೂವಿನ ಹಾರವನ್ನೂ ಹಾಕದೆ ಅಮಾನವೀಯವಾಗಿ ವರ್ತಿಸಿದೆ.

ಕೆಂಗಲ್ ಹನುಮಂತಯ್ಯನವರು ವಿಧಾನಸೌಧವನ್ನು ಕಟ್ಟಿಸಿ ಇತಿಹಾಸ ನಿರ್ಮಿಸಿದರು. ಅವರ ನೆನಪಿಗಾಗಿ ರಾಜ್ಯದಲ್ಲಿ ಉಳಿದಿರುವುದು ಒಂದು ಸಮಾಧಿ ಮಾತ್ರ. ಅದೂ ಈಗ ದೂಳು, ಕಸ-ಕಡ್ಡಿಗಳಿಂದ ಕೂಡಿ ದುಃಸ್ಥಿತಿಗೆ ಬಂದಿದೆ. ವಜ್ರಮಹೋತ್ಸವದ ಸಂದರ್ಭದಲ್ಲಾದರೂ ಅವರ ಸಮಾಧಿಗೊಂದು ಹೂಗುಚ್ಛವನ್ನಿಟ್ಟು ಸರ್ಕಾರ ಅವರನ್ನು ಗೌರವಿಸಬೇಕಾಗಿತ್ತು.

–ವೀರೇಶ ಡಿ.ಟಿ., ಭರಮಸಾಗರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.