ವರ್ಷದಿಂದ ವರ್ಷಕ್ಕೆ
ಜನಸೇವಕರಾಗುತ್ತಿದ್ದಾರೆ
ಕೋಟಿ ಕೋಟಿ ಒಡೆಯರು
ಭೀಕರ ಬರಗಾಲದಲ್ಲೂ ಬೆಳ್ಳಿ,
ಬಂಗಾರ, ಬಂಗಲೆಗಳುಳ್ಳ ಧಣಿಗಳು
ಮತ್ತೆ ಅಣಿಯಾಗುತ್ತಿದ್ದಾರೆ
ದಣಿವರಿಯದೇ ದುಡಿದು ಬಡಿಯಲು
ನಮ್ಮ ನಾಯಕ ಮಣಿಗಳು
ಸಂಪೂರ್ಣ ಸಹಕರಿಸುವರೆ
ಮಾನ್ಯ ಮತದಾರ ಪ್ರಭುಗಳು!
-ವಿಜಯ್ ರಾಂಪುರ ,ಚನ್ನಪಟ್ಟಣ .
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.