ADVERTISEMENT

ಗೋವಾಕ್ಕೆ ಕಾರವಾರ ಏಕೆ?

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2010, 8:25 IST
Last Updated 18 ಡಿಸೆಂಬರ್ 2010, 8:25 IST

ಗೋವಾದ ಮಾಜಿ ಮತ್ತು ಹಾಜಿ ಮಂತ್ರಿಗಳೆಲ್ಲ ತರಲೆ ಆರಂಭಿಸಿದ್ದಾರೆ. ಗೋವಾದ ಮಾಜಿ ಸಚಿವ ಸಂಜಯ ಬಾಂದೇಕರ ಕಾರವಾರ ಗೋವಾಕ್ಕೆ ಸೇರಬೇಕು ಎಂದು ಹೇಳಿ ನಂತರ ಕನ್ನಡಿಗರ ಕ್ಷಮೆ ಯಾಚಿಸಿದರು. ಈಗ ಅಲ್ಲಿನ ಲೋಕೋಪಯೋಗಿ ಸಚಿವ ಚರ್ಚಿಲ್ ಅಲೆಮೊ ಮತ್ತೆ ಅದೇ ರಾಗ ಎತ್ತಿದ್ದಾರೆ.

ಕಾರವಾರದಲ್ಲಿ ಸಾಕಷ್ಟು ಸಮಸ್ಯೆಗಳಿರುವುದು ನಿಜ. ಆದರೆ ಅದಕ್ಕಾಗಿ ಕನ್ನಡ - ಕೊಂಕಣಿ ಭಾಷಾ ಸಾಮರಸ್ಯದ ನಡುವೆ ಹುಳಿ ಹಿಂಡಿ ಕಾರವಾರವನ್ನು ಗೋವಾಕ್ಕೆ ಸೇರಿಸಿ ಎಂದು ಹೇಳುವುದು ಉದ್ಧಟತನ. ಕಾರವಾರವನ್ನು ಗೋವಾಕ್ಕೆ ಸೇರಿಸುವಂತೆ ಪ್ರಚೋದನೆ ಮಾಡುವುದು ಅದಕ್ಕೆ ಪ್ರತಿಯಾಗಿ ಕನ್ನಡ ಸಂಘಟನೆಗಳು ವಿರೋಧಿಸುವುದರಲ್ಲಿ ಅರ್ಥವೇ ಇಲ್ಲ. ಕನ್ನಡ ಮತ್ತು ಕೊಂಕಣಿ ಎರಡೂ ಭಾಷೆಗಳನ್ನು ಮಾತನಾಡುವ ಜನರು ಅನ್ಯೋನ್ಯದಿಂದ ಇರುವಾಗ ಅನಗತ್ಯವಾಗಿ ಗೊಂದಲ ಸೃಷ್ಟಿಸುವುದು ಸರಿಯಲ್ಲ. ಕರ್ನಾಟಕ ಸರ್ಕಾರ ಯಾವುದೇ ರೀತಿಯಲ್ಲೂ ಕೊಂಕಣಿ ಭಾಷೆಗೆ ಅನ್ಯಾಯ ಮಾಡಿಲ್ಲ. ಕರ್ನಾಟಕದ ಪಠ್ಯ ಪುಸ್ತಕಗಳಲ್ಲಿ ಕೊಂಕಣಿಯನ್ನು ಒಂದು ಐಚ್ಚಿಕ ಭಾಷೆಯನ್ನಾಗಿ ಕಲಿಯಲು ಅನುವು ಮಾಡಿಕೊಟ್ಟಿದೆ. ಕೊಂಕಣಿ ಜನರಿಗೆ ರಾಜಕೀಯ - ಆರ್ಥಿಕ - ಸಾಹಿತ್ಯ - ಮನರಂಜನೆ ಎಲ್ಲಾ ಕ್ಷೇತ್ರಗಳಲ್ಲಿ ಇರುವಂತೆ ನ್ಯಾಯ ಒದಗಿಸಿದೆ. ಕರ್ನಾಟಕದಲ್ಲಿ ಕೊಂಕಣಿ ಚಿತ್ರ ಮಾಡುವವರಿಗೆ 5 ಲಕ್ಷ ರೂ. ಸಬ್ಸಿಡಿ ಒದಗಿಸಿದೆ.

ಈ ಹಿಂದೆ ಗೋವಾ ಕೇಂದ್ರಾಡಳಿತದಿಂದ ಬೇರ್ಪಟ್ಟು ಪ್ರತ್ಯೇಕ ರಾಜ್ಯವಾದಾಗ ತನ್ನ ಅಧೀನದಲ್ಲಿದ್ದ ದಿಯು ಮತ್ತು ದಮನ್ ದ್ವೀಪಗಳನ್ನು ನೋಡಿಕೊಳ್ಳಲಾಗದೆ ಕೇಂದ್ರ ಸರ್ಕಾರಕ್ಕೆ ಮರಳಿಸಿತು. ಹಾಗಿರುವಾಗ ಕೇವಲ ಭಾಷೆಯ ಆಧಾರದ ಮೇಲೆ ಕಾರವಾರವನ್ನು ತನ್ನ ರಾಜ್ಯಕ್ಕೆ ಸೇರಿಸಿ ಎಂದು ಕೇಳುವುದು ಸಮಂಜಸವೇ?

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.