ADVERTISEMENT

ಗ್ರಾಮೀಣ ಕಲ್ಯಾಣ ಮಂಟಪ ಬೇಕು

ಪಿ.ಎಸ್.ನರಸಿಂಹರೆಡ್ಡಿ, ಚಿತ್ರದುರ್ಗ
Published 4 ಡಿಸೆಂಬರ್ 2012, 19:40 IST
Last Updated 4 ಡಿಸೆಂಬರ್ 2012, 19:40 IST

ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಎಲ್ಲಾ ರಾಜಕೀಯ ಪಕ್ಷಗಳು ತಂತಮ್ಮ ಪ್ರಣಾಳಿಕೆ ಬಿಡುಗಡೆಗೊಳಿಸುವ ಸಂದರ್ಭದಲ್ಲಿ  ಜನರ ಹಿತವನ್ನೂ ನೋಡಬೇಕು.

ಗ್ರಾಮೀಣ ಜನರು ತಮ್ಮ ಮಕ್ಕಳ ಮದುವೆ ಹಾಗೂ ಇನ್ನಿತರ ಶುಭಕಾರ್ಯ ಮಾಡಲು ನಗರಗಳ ಕಲ್ಯಾಣ ಮಂಟಪಗಳಲ್ಲಿ ದುಬಾರಿ ವೆಚ್ಚ ಮಾಡಿ ಸಾಲಗಾರರಾಗಿ ಕಷ್ಟ ಅನುಭವಿಸುತ್ತಾರೆ.

ಇದನ್ನು ತಪ್ಪಿಸಲು ಪ್ರತಿ ಗ್ರಾಮ ಪಂಚಾಯಿತಿಗೆ ಒಂದರಂತೆ ಸರ್ಕಾರದ ವತಿಯಿಂದ ಗ್ರಾಮೀಣ ಕಲ್ಯಾಣ ಮಂಟಪಗಳನ್ನು ಕಟ್ಟಿಸಿ  ಅನುಕೂಲ ಮಾಡಿಕೊಡುವ ಅಂಶ ಪ್ರಣಾಳಿಕೆಯಲ್ಲಿ ಇರಲಿ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.