
ನಗರದ ಬನಶಂಕರಿ ಬಸ್ ನಿಲ್ದಾಣದಿಂದ ಆವಲಹಳ್ಳಿ ಕಡೆ ಸಂಚರಿಸುವ ಬಸ್ಸುಗಳಲ್ಲಿ 215 ಎ, 215 ಬಿ, 215 ಕೆ ಮಾರ್ಗ ಸಂಖ್ಯೆಯ ಬಸ್ಸುಗಳು ರಾತ್ರಿಯ ವೇಳೆಯಲ್ಲಿ ಅಧಿಕ ಜನದಟ್ಟಣೆಯಿದ್ದು, ಅದನ್ನೇ ದುರುಪಯೋಗ ಪಡಿಸಿಕೊಂಡಂತೆ ಜೇಬುಗಳ್ಳರು ತಮ್ಮ ಕೈಚಳಕವನ್ನು ತೋರಿಸುತ್ತಿರುತ್ತಾರೆ. ಹೆಚ್ಚುತ್ತಿರುವ ಪ್ರಯಾಣಿಕರ ನೂಕುನುಗ್ಗಲಿನ ನಡುವೆ ಬಸ್ಸು ಹತ್ತುವ ನೆಪದಲ್ಲಿ ಕಿಸೆಗಳ್ಳರು ಕೈಗೆ ಸಿಕ್ಕಿದ್ದನ್ನು ಹಾರಿಸುತ್ತಾರೆ.
ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿ ಒಬ್ಬರ ನಂತರ ಒಬ್ಬರು ಹತ್ತುವಂತೆ ಸರತಿಯ ಸಾಲನ್ನು ಪ್ರಾರಂಭಿಸಿ ಕಿಸೆಗಳ್ಳರ ಹಾವಳಿಯನ್ನು ತಪ್ಪಿಸಬೇಕಾಗಿ ಮನವಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.