ADVERTISEMENT

ದರ್ಶನ್ ಸಾರ್ವಜನಿಕವಾಗಿ ಪತ್ನಿಯ ಕ್ಷಮೆ ಕೋರಲಿ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2011, 19:30 IST
Last Updated 13 ಸೆಪ್ಟೆಂಬರ್ 2011, 19:30 IST

ನಟ ದರ್ಶನ್ ಹೆಂಡತಿಗೆ ಹೊಡೆದ ಪ್ರಕರಣದ ಹಿನ್ನೆಲೆಯಲ್ಲಿ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಹೆಂಡತಿಗೆ ಹೊಡೆಯುವುದು ಶೌರ್ಯವಲ್ಲ ಕ್ರೌರ್ಯ. ನಟ ಅಂಬರೀಷ್,  ` ಗಂಡ ಹೆಂಡತಿಗೆ ಹೊಡೆಯುವುದು, ಮಗ ತಾಯಿಗೆ ಹೊಡೆಯುವುದು ಕುಟುಂಬದಲ್ಲಿ ಸರ್ವೇ ಸಾಮಾನ್ಯ~ ಎಂದಿರುವುದು ಸರಿಯಲ್ಲ.

ಮಕ್ಕಳು ದಾರಿ ತಪ್ಪಿದಾಗ ತಂದೆ ತಾಯಿ ಗದರಿಸುತ್ತಾರೆ, ಅದಕ್ಕೂ ಸರಿಹೋಗದಿದ್ದರೆ ಅತ್ಯಂತ ವಿಷಾದದಿಂದ ಬಡಿಯುತ್ತಾರೆ. ಬಡಿದು, ಬಡಿದದ್ದಕ್ಕಾಗಿ ವಿಷಾದದಿಂದ ಅಳುತ್ತಾರೆ. ಮಕ್ಕಳು ತಾಯಿಯನ್ನು ಬಡಿಯುವುದನ್ನು ಸಮರ್ಥಿಸುವುದಂತೂ ತೀರಾ ಅನ್ಯಾಯದ ವಿಷಯ. ಪ್ರೀತಿಯಿಂದ ಗೆಲ್ಲಲಾಗದವರು ಕ್ರೌರ್ಯಕ್ಕಿಳಿಯುತ್ತಾರೆ.

ಭಿನ್ನಮತವನ್ನು ಸಹಿಸುವ, ಚರ್ಚಿಸುವ ಮನೋಧರ್ಮ ಮನೆ ಮನೆಗಳಲ್ಲಿ ಬೆಳೆದು ಬರಬೇಕು. ಮನೆಗಳು ಪ್ರಜಾಪ್ರಭುತ್ವದ ತಾಣಗಳಾಗಬೇಕು. ಅಪ್ಪ ಆಳುವ ಪಕ್ಷಕ್ಕೆ ಸೇರಿದ್ದರೆ, ಅಮ್ಮ, ಮಕ್ಕಳು ಕೇಳುವ ಪಕ್ಷಕ್ಕೆ ಸೇರಿರುತ್ತಾರೆ. ಅಪ್ಪನನ್ನು ಪ್ರಶ್ನಿಸದಿದ್ದರೆ ಆತ ಸರ್ವಾಧಿಕಾರಿಯಾಗುತ್ತಾನೆ.

ದೊಡ್ಡ ಕುಟುಂಬಗಳ ಜನ ಹೊಂದಾಣಿಕೆಯಿಂದ ಬದುಕುತ್ತಿದ್ದರು. ಗಂಡ, ಹೆಂಡತಿ, ಮಕ್ಕಳ ಸಣ್ಣ ಕುಟುಂಬದ ಜನ ಗುದ್ದಾಡಿ ಹಾಳಾಗುತ್ತಿರುವುದು ಭೋಗಲಾಲಸೆಯಿಂದ. ದರ್ಶನ್‌ನ ತೆರೆಯ ಹಿಂದಿನ ಬದುಕು ಸರಿಯಾಗಬೇಕು.

ದರ್ಶನ್ ಸಾರ್ವಜನಿಕವಾಗಿ ಪತ್ನಿಯ ಕ್ಷಮೆ ಕೋರುವುದು ಆತನ ಮನಸ್ಸಿನ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.