ADVERTISEMENT

ನೀತಿನಿಯಮಗಳಿಗೂ ಅರ್ಥವಿರಲಿ

ಸಾಮಗ ದತ್ತಾತ್ರಿ
Published 21 ಏಪ್ರಿಲ್ 2013, 19:59 IST
Last Updated 21 ಏಪ್ರಿಲ್ 2013, 19:59 IST

ಚುನಾವಣಾ ನೀತಿ ಸಂಹಿತೆಯ ನೆಪದಲ್ಲಿ ಧಾರ್ಮಿಕಾಚರಣೆಗಳಿಗೆ ನಿರ್ಬಂಧ ಹೇರುವ ಚುನಾವಣಾಧಿಕಾರಿಗಳಿಗೆ ವಿವೇಚನೆ ಮತ್ತು ಅದರ ನ್ಯಾಯಯುತ ಬಳಕೆ ಎಂದರೇನೆಂಬುದು ತಿಳಿದಂತಿಲ್ಲ.

ಶ್ರೀರಾಮನವಮಿ ಮತ್ತು ಹನುಮಜ್ಜಯಂತಿಗಳ ಅಂಗವಾಗಿ ಹಮ್ಮಿಕೊಂಡ ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಅನ್ನಸಂತರ್ಪಣೆಯನ್ನೂ ಒಂದು ಮಠ ಇಟ್ಟುಕೊಂಡಿದ್ದಕ್ಕೆ ಚುನಾವಣಾಧಿಕಾರಿಗಳು ಅನ್ನಸಂತರ್ಪಣೆ ಮತ್ತು ತೀರ್ಥಪ್ರಸಾದ ವಿತರಿಸದಂತೆ ತಾಕೀತು ಮಾಡಿರುವುದು (ಪ್ರ. ವಾ. ಏ. 18) ಚುನಾವಣಾ ಸಮಯದ ನೀತಿಸಂಹಿತೆಯ ಉಲ್ಲಂಘನೆಯಲ್ಲ.

ಸಂಬಂಧಪಟ್ಟ ಚುನಾವಣಾಧಿಕಾರಿಗಳ ವಿವೇಚನಾಧಿಕಾರದ ಉಲ್ಲಂಘನೆ. ಇಂತಹ ಧಾರ್ಮಿಕಾಚರಣೆಗಳು ನಿರ್ದಿಷ್ಟ ದಿನಗಳಂದು ನಡೆದುಕೊಂಡು ಬರುವಂಥವು; ಅಲ್ಲದೇ, ಸದರಿ ಮಠವು ಪ್ರಪ್ರಥಮವಾಗಿ ಈ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆಯೆನ್ನುವುದು ಚುನಾವಣಾಧಿಕಾರಿಗಳ ತೀರ್ಮಾನವೇ? ಒಂದು ವೇಳೆ ರಾಜಕೀಯ ಪಕ್ಷಗಳು ಇಂತಹ ಸಂದರ್ಭಗಳನ್ನು ಪ್ರಚಾರಕ್ಕೆ ಬಳಸಬಹುದು ಎಂದು ಚುನಾವಣಾಧಿಕಾರಿಗಳು ಸಂಶಯಪಟ್ಟರೆ, ಮಾರುವೇಷದಲ್ಲಿ ಅದನ್ನು ಪತ್ತೆಹಚ್ಚಬಹುದಲ್ಲ! ಯಾವುದಾದರೂ ರಾಜಕೀಯ ಪಕ್ಷ ಅಥವಾ ಅಭ್ಯರ್ಥಿ ಅಥವಾ ಆತನ ಆಪ್ತರು ಈ ಸಮಾರಂಭದ ಖರ್ಚು ವೆಚ್ಚಗಳನ್ನು ಭರಿಸುವನೆಂಬ ಬಗ್ಗೆ ಚುನಾವಣಾಧಿಕಾರಿಗಳಿಗೆ ಮನದಟ್ಟಾಗಿದೆಯೇ?

ಮದುವೆಯ ನಂತರದ ಬೀಗರೂಟದ ಕಾರ್ಯಕ್ರಮಕ್ಕೆ ತಡೆಯಂತೆ! ಎಂತಹ ವಿಪರ್ಯಾಸ, ಚುನಾವಣಾಧಿಕಾರಿಗಳು ನೀತಿಸಂಹಿತೆಯ ಹೆಸರಿನಲ್ಲಿ ಮನಸ್ಸಿಗೆ ಬಂದಂತೆ ವರ್ತಿಸಲು ಅವಕಾಶವಿದೆಯೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.