ADVERTISEMENT

ಬಸ್ ಕಿಟಕಿ ಸರಿಪಡಿಸಿ

ಜೆ.ಆರ್‌.ಆದಿನಾರಾಯಣ ಮುನಿ, ಬೆಂಗಳೂರು
Published 2 ಡಿಸೆಂಬರ್ 2013, 19:30 IST
Last Updated 2 ಡಿಸೆಂಬರ್ 2013, 19:30 IST

ಬಿ.ಎಂ.ಟಿ.ಸಿ.ಯ ಕೆಲವು ಬಸ್ಸುಗಳಲ್ಲಿ ಕಿಟಕಿಯ ಗಾಜುಗಳು ಸರಿಯುವುದೇ ಇಲ್ಲ. ಮಳೆ ಬಂದರೆ ಪ್ರಯಾಣಿಕರಿಗೆ ಅನಾನುಕೂಲವಾಗುತ್ತಿದೆ. ಮಳೆ ನೀರು ಬಸ್‌ಗೆ ನುಗ್ಗುವುದರಿಂದ ನೆನೆಯುವಂತಾಗಿದೆ.

ಮಳೆ ಜೋರಾಗಿ ಬಂದರೆ ನೆನೆಯುವುದನ್ನು ತಪ್ಪಿಸಿಕೊಳ್ಳಲು ಪ್ರಯಾಣಿಕರು ನಿಂತೇ ಹೋಗಬೇಕಾಗಿ ಬರುತ್ತದೆ. ಇದಲ್ಲದೆ ಬಸ್‌ಗಳನ್ನು ನಿಗದಿತವಾಗಿ ಸ್ವಚ್ಛಗೊಳಿಸುವುದಿಲ್ಲ. ಕೊಳೆ, ಕಸ, ಕೆಸರು ಎಲ್ಲವೂ ಮಳೆ ನೀರಿನಿಂದಾಗಿ ಬಸ್‌ಗೆ ಕಾಲಿಡದಂತೆ ಮಾಡುತ್ತಿವೆ. ಬಸ್‌ನ ಸ್ವಚ್ಛತೆ ಹಾಗೂ ಸೌಲಭ್ಯಗಳನ್ನು ಪರಿಶೀಲಿಸಿಯೇ ಸಂಚಾರಕ್ಕೆ ಬಿಟ್ಟರೆ ಒಳಿತು.

ಆಗಾಗ ಸ್ವಚ್ಛಗೊಳಿಸಿ, ಕಿಟಕಿಗಳನ್ನು ಸುಭದ್ರಗೊಳಿಸಿ. ಕಿಟಕಿಯ ಗಾಜು ಸರಾಗವಾಗಿ ಹಿಂದೆ ಮುಂದೆ ಸರಿಯುವಂತೆ ಮಾಡಿದರೆ, ಸಾಮಾನ್ಯ ಪ್ರಯಾಣಿಕನ ಸುರಕ್ಷೆ ಮತ್ತು ಸೌಲಭ್ಯ ಎರಡನ್ನೂ ರಕ್ಷಿಸಿದಂತಾಗುತ್ತದೆ. ಹಳೆಯ ಬಸ್‌ಗಳಾದರೂ ಸರಿ, ಸುಭದ್ರಗೊಳಿಸುವುದು ಸಾಧ್ಯವೇ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.